ADVERTISEMENT

ಹಿಡಿಶಾಪ ಅಧಿಕಾರಿಗಳಿಗೂ ತಟ್ಟಲಿದೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 20:16 IST
Last Updated 9 ಜುಲೈ 2019, 20:16 IST

‘ಐ ಮಾನಿಟರಿ ಅಡ್ವೈಸರಿ’ (ಐಎಂಎ) ಕಂಪನಿಯ ಪರ ವರದಿ ನೀಡಲು ₹ 4.5 ಕೋಟಿ ಲಂಚ ಪಡೆದ ಆರೋಪದ ಮೇಲೆ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಅವರನ್ನು ಬಂಧಿಸಲಾಗಿದೆ.

ನಮ್ಮ ಅಧಿಕಾರಿಗಳು, ಹಣದ ದುರಾಸೆಗೆ ಬಲಿಯಾಗದೆ, ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಐಎಂಎ ವಸ್ತುಸ್ಥಿತಿಯನ್ನು ಉಲ್ಲೇಖಿಸಿದ್ದರೆ ಪ್ರಕರಣ ಹೊಸ ತಿರುವು ಪಡೆದು, ಈಗ ವಂಚನೆಗೆ ಒಳಗಾಗಿರುವ ಹೂಡಿಕೆದಾರರಿಗೆ ಸ್ವಲ್ಪವಾದರೂ ಅನುಕೂಲವಾಗಿರುತ್ತಿತ್ತೇನೊ.

ಮೋಸ ಹೋಗಿರುವ ಜನರು ಹಾಕುತ್ತಿರುವ ಹಿಡಿ ಶಾಪ ಅಧಿಕಾರಿಗಳಿಗೂ ತಟ್ಟಲಿದೆ. ಸರ್ಕಾರದ ಉನ್ನತ ಹುದ್ದೆಯಲ್ಲಿರುವವರು ತಲೆ ತಗ್ಗಿಸುವಂತಹ ಕೆಲಸ ಮಾಡುವುದು ನಾಚಿಕೆಗೇಡು.
-ಮಂಜುನಾಥ್ ಜೈನ್ ಎಂ.ಪಿ., ಮಂಡ್ಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.