ADVERTISEMENT

ಮನ ಮೆಚ್ಚುವ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2019, 19:45 IST
Last Updated 26 ಜುಲೈ 2019, 19:45 IST

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಮಗುವೊಂದು ಬಸ್‌ನಿಂದ ಸರಿಯಾಗಿ ಇಳಿಯುವಂತೆ ನೋಡಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ ನಿರ್ವಾಹಕರೊಬ್ಬರಿಗೆ ಬಾಲಗೃಹದಲ್ಲಿ 10 ದಿನ ಕೆಲಸ ಮಾಡುವಂತೆ ಶಿಕ್ಷೆ ನೀಡಿರುವ (ಪ್ರ.ವಾ., ಜುಲೈ 26) ಜಿಲ್ಲಾಧಿಕಾರಿಯ ನಡೆ ಶ್ಲಾಘನೀಯ.

ಕೆಲ ದಿನಗಳ ಹಿಂದೆ, ನ್ಯಾಯಾಂಗ ನಿಂದನೆ ಎದುರಿಸಿದ್ದ ದಂಪತಿಗೆ ಸರ್ಕಾರಿ ಆಸ್ಪತ್ರೆಯಲ್ಲಿ 100 ಗಂಟೆಗಳ ಕಾಲ ರೋಗಿಗಳ ಆರೈಕೆ ಮಾಡುವಂತೆ ಸಾಮಾಜಿಕ ಸೇವೆಯ ಶಿಕ್ಷೆಯನ್ನು ಕೇರಳದ ಹೈಕೋರ್ಟ್ ನೀಡಿತ್ತು.

ಇಂತಹ ಪ್ರಕರಣಗಳಲ್ಲಿ ತಪ್ಪು ಮಾಡುವವರಿಗೆ ಸಾಮಾನ್ಯವಾಗಿ ದಂಡ, ಜೈಲುವಾಸದಂತಹ ಶಿಕ್ಷೆಗಳನ್ನು ನೀಡಲಾಗುತ್ತದೆ. ಇದರಿಂದ ಅಪರಾಧಿಗಳಿಗೆ ತಾವು ತಪ್ಪಿತಸ್ಥರು ಎಂಬ ಭಾವನೆ ಮೂಡಿ, ಮಾನಸಿಕ ಯಾತನೆ ಉಂಟಾಗುತ್ತದೆ. ಆದರೆ ಸಮಾಜ ಸೇವೆ ಮಾಡುವಂತಹ ಶಿಕ್ಷೆಗಳನ್ನು ವಿಧಿಸಿದರೆ ಸಮಾಜಕ್ಕೂ ಒಳ್ಳೆಯದಾಗುವುದಲ್ಲದೆ, ಅಪರಾಧಿಗಳ ಮನಃಪರಿವರ್ತನೆಗೂ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ.

ADVERTISEMENT

- ಯೋಗೇಶ್ ವೈ.ಸಿ., ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.