ADVERTISEMENT

ಪ್ರತಿಭಟನೆ: ವಿಚಿತ್ರ ವಿದ್ಯಮಾನ!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 25 ಜನವರಿ 2022, 19:30 IST
Last Updated 25 ಜನವರಿ 2022, 19:30 IST

ರಾಜ್ಯ ಸರ್ಕಾರ ವಾರಾಂತ್ಯ ಕರ್ಫ್ಯೂ ತೆಗೆದು ಹಾಕುವಾಗ, ಪ್ರತಿಭಟನೆ, ಮೆರವಣಿಗೆಯಂತಹ ಗುಂಪುಗೂಡುವ ಕಾರ್ಯಕ್ರಮಗಳನ್ನು ಮಾಡಬಾರದೆಂದು ಮನವಿ ಮಾಡಿತ್ತು. ಆದರೂ ಮರುದಿನದ ಪತ್ರಿಕೆ ನೋಡಿದರೆ, ಪುರ ಭವನದ ಬಳಿ ಪ್ರತಿಭಟನೆ, ಮುಳಬಾಗಿಲಿನಲ್ಲಿ ಗುಂಪು ಚದುರಿಸಲು ಲಘು ಲಾಠಿ ಪ್ರಹಾರ, ಕೋವಿಡ್ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ ಇಂತಹದ್ದೇ ಸುದ್ದಿಗಳು.

ನಿಯಮ ಮಾಡಿದರೂ ವಿರೋಧ, ಮಾಡದಿದ್ದರೂ ವಿರೋಧ. ಅಳದಿದ್ದರೆ ಮಗುವಿಗೆ ತಾಯಿಯೂ ಹಾಲು ಕೊಡುವುದಿಲ್ಲ ಎನ್ನುವ ನುಡಿಗಟ್ಟಿನಂತೆ, ಪ್ರತಿಭಟನೆ ಮಾಡದಿದ್ದರೆ ಆಗುವುದಿಲ್ಲ ಎಂದು ಪ್ರತಿಭಟನೆ ಮಾಡುವ ವರೂ, ಪ್ರತಿಭಟನೆ ಮಾಡಲಿ ಆಮೇಲೆ ನೋಡೋಣ ಎಂದು ಆಡಳಿತ ನಡೆಸುವವರೂ ಕಾಯುತ್ತಿರುವಂತೆ, ಜನ ಸಾಮಾನ್ಯರೂ ಇದೊಂದು ಮನರಂಜನೆ ಎಂದು ಆನಂದಿಸುತ್ತಿರುವಂತೆ ಕಾಣುತ್ತದೆ. ಪ್ರತಿಭಟನೆ ಮಾಡುವವರು ತಮ್ಮ ಪ್ರತಿಭಟನೆಯಿಂದ ಏನೂ ಪ್ರಯೋಜನ ಇಲ್ಲವೆಂದು ಗೊತ್ತಿದ್ದರೂ ಅದೊಂದು ತಮ್ಮ ಕರ್ತವ್ಯ ಎಂದು ಭಾವಿಸಿದಂತಿದೆ. ಸಾಂಕ್ರಾಮಿಕದ ಈ ಸಂಕೀರ್ಣ ಸಮಯದಲ್ಲಿ ಕೋವಿಡ್‌ ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ಇವರ‍್ಯಾರಿಗೂ ಸಾಮಾನ್ಯ ಸಾಮಾಜಿಕ ಪ್ರಜ್ಞೆ, ಬದ್ಧತೆ ಮತ್ತು ಕಾಳಜಿ ಇದ್ದಂತೆ ಕಾಣುವುದಿಲ್ಲ.⇒

- ಟಿ.ವಿ.ಬಿ.ರಾಜನ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.