ADVERTISEMENT

‘ಅತಿಥಿ ಸಚಿವ’ರಾಗುವುದು ಬೇಡ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 25 ಜನವರಿ 2022, 19:30 IST
Last Updated 25 ಜನವರಿ 2022, 19:30 IST

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ, ಪುನರ್‌ರಚನೆಯ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಜಿಲ್ಲಾ ಉಸ್ತು ವಾರಿ ಸಚಿವರ ನೇಮಕವಾಗಿದೆ. ಬಹುತೇಕ ಸಚಿವರನ್ನು ತಮ್ಮ ತವರು ಜಿಲ್ಲೆಗಳನ್ನು ಬಿಟ್ಟು ಬೇರೆ ಜಿಲ್ಲೆಗಳಿಗೆ ನೇಮಕ ಮಾಡಲಾಗಿದೆ. ರಾಜಕೀಯ ಸಂಘರ್ಷ ಏರ್ಪಡಬಾರದು ಎಂಬ ಕಾರಣದಿಂದ ಮುಖ್ಯಮಂತ್ರಿ ಈ ನಿರ್ಧಾರತೆಗೆದುಕೊಂಡಿದ್ದರೂ, ಅಭಿವೃದ್ಧಿ ವಿಚಾರವಾಗಿ ಇದು ಸೂಕ್ತ ನಿರ್ಧಾರವಲ್ಲ. ಬೇರೆ ಜಿಲ್ಲೆಗಳ ಸಚಿವರನ್ನು ಉಸ್ತುವಾರಿಯಾಗಿ ನೇಮಕ ಮಾಡುವುದರಿಂದ ಉಸ್ತುವಾರಿ ವಹಿಸಿಕೊಂಡ ಜಿಲ್ಲೆಗಳಲ್ಲಿ ಆ ಸಚಿವರು ಯಾವುದೇ ಸಭೆಗಳನ್ನು ನಡೆಸದೆ, ಜಿಲ್ಲೆಗೆ ಅಗತ್ಯಾನುಸಾರ ಭೇಟಿ ಕೊಡದೆ, ಸರ್ಕಾರಿ ಅಧಿಕಾರಿಗಳ ಸಭೆ ನಡೆಸದೇ ಇರುವುದ ರಿಂದ ಅಭಿವೃದ್ಧಿ ಕಾಮಗಾರಿಗಳು ಚುರುಕು ಪಡೆಯುವುದಿಲ್ಲ. ಈ ಕುರಿತು ಈಗಾಗಲೇ ಸಾರ್ವಜನಿಕರು ಅನೇಕ ಬಾರಿ ಅಸಮಾಧಾನ ವನ್ನು ವ್ಯಕ್ತಪಡಿಸಿದ್ದಾರೆ.

ಕೋವಿಡ್ ಕಾಲಘಟ್ಟದ ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಪಾತ್ರ ಮಹತ್ವದ್ದಾಗಿರುತ್ತದೆ. ಕೋವಿಡ್ ನಿರ್ವಹಣೆ ಮತ್ತು ಪೂರ್ವಸಿದ್ಧತೆ ಕುರಿತ ಮೇಲ್ವಿಚಾರಣೆಗಾಗಿ ಸಚಿವರು ಆಗಾಗ ಆಯಾ ಜಿಲ್ಲೆಗಳಿಗೆ ಭೇಟಿ ನೀಡಬೇಕಾ ಗುತ್ತದೆ. ಅಲ್ಲಿನ ಕುಂದುಕೊರತೆಗಳನ್ನು ಆಲಿಸಬೇಕಾಗುತ್ತದೆ. ಆದರೆ ಈ ಹಿಂದಿನ ಬಹುತೇಕ ಸಚಿವರು ಆ ಕೆಲಸ ವನ್ನು ಮಾಡಿಲ್ಲ. ಅದಕ್ಕೆ ಮುಖ್ಯ ಕಾರಣ ಅವರು ಆ ಜಿಲ್ಲೆಯವರಲ್ಲ ಎಂಬುದು. ಹೀಗಾಗಿ ಮುಖ್ಯಮಂತ್ರಿ ಈ ಬಾರಿ ಆಯಾ ಜಿಲ್ಲೆಗಳ ಜನಪ್ರತಿನಿಧಿಗಳನ್ನೇ ಆಯಾ ಜಿಲ್ಲಾ ಉಸ್ತುವಾರಿಗಳನ್ನಾಗಿ ನೇಮಿಸಬೇಕಿತ್ತು. ಇಲ್ಲವಾದಲ್ಲಿಆಗೊಮ್ಮೆ-ಈಗೊಮ್ಮೆ ಭೇಟಿ ಕೊಡುವ ಮೂಲಕ ಅತಿಥಿ ಸಚಿವರಾಗುವ ಸಂಪ್ರದಾಯಕ್ಕೆ ತಿಲಾಂಜಲಿ ನೀಡುವಂತೆ ಖಡಕ್ ಸೂಚನೆ ನೀಡಬೇಕಿದೆ.

- ಬೇ.ನ.ಶ್ರೀನಿವಾಸಮೂರ್ತಿ,ತುಮಕೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.