ADVERTISEMENT

ಒಕ್ಕೂಟ ವ್ಯವಸ್ಥೆ ಅತ್ತೆ– ಸೊಸೆ ಸಂಬಂಧದಂತಾದರೆ!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 23 ಜನವರಿ 2022, 19:31 IST
Last Updated 23 ಜನವರಿ 2022, 19:31 IST

ಗಣರಾಜ್ಯೋತ್ಸವದ ಪರೇಡ್‌ಗಾಗಿ ಪಶ್ಚಿಮ ಬಂಗಾಳವು ಸಲ್ಲಿಸಿದ್ದ ಸುಭಾಷ್‌ಚಂದ್ರ ಬೋಸ್ ಅವರ ಚಿತ್ರ ಒಳಗೊಂಡ ಸ್ತಬ್ಧಚಿತ್ರದ ಪ್ರಸ್ತಾವವನ್ನು ತಿರಸ್ಕರಿಸಿ, ಈಗ ಇಂಡಿಯಾ ಗೇಟ್ ಬಳಿ ಅವರ ಪ್ರತಿಮೆ ಸ್ಥಾಪನೆಗೆ ನಮ್ಮ ಪ್ರಧಾನಿ ಮುಂದಾಗಿರುವುದು ಒಂದು ನಗೆ ಹನಿಯನ್ನು ನೆನಪಿಗೆ ತರುವಂತಿದೆ:

ಮನೆ ಮುಂದೆ ಭಿಕ್ಷೆ ಬೇಡಲು ಬಂದ ಭಿಕ್ಷುಕನಿಗೆ ಆ ಮನೆಯ ಸೊಸೆ, ‘ಏನೂ ಇಲ್ಲ ಮುಂದಕ್ಕೆ ಹೋಗಪ್ಪ’ ಎಂದಳಂತೆ. ಇದರಿಂದ ಉರಿದೆದ್ದ ಅತ್ತೆ, ‘ನೀನ್ಯಾವೋಳೆ ಭಿಕ್ಷುಕನನ್ನು ವಾಪಸ್ ಕಳಿಸೋಕೆ’ ಅಂತ ಹೇಳಿ, ಭಿಕ್ಷುಕನನ್ನು ಕರೆದು ‘ಮತ್ತೆ ಬೇಡು’ ಎಂದಳಂತೆ. ಭಿಕ್ಷುಕ ಉತ್ಸಾಹದಿಂದ ತನ್ನ ಬೇಡಿಕೆಯನ್ನು ಮತ್ತೆಮಂಡಿಸಿದ. ಆಗ ಅತ್ತೆ, ‘ಏನೂ ಇಲ್ಲ ಮುಂದಕ್ಕೆ ಹೋಗು’ ಎಂದಳಂತೆ! ಪ್ರತಿಮೆಯ ಪ್ರತಿಷ್ಠಾಪನೆ ಮೇಲಿನ ಕಥೆಯ ವಿಲೋಮದ ಹೋಲಿಕೆ ಎನ್ನಬಹುದೇ?! ಒಕ್ಕೂಟ ವ್ಯವಸ್ಥೆಯು ಅತ್ತೆ- ಸೊಸೆಯರ ಸಂಬಂಧದಂತಾದರೆ ರಾಜ್ಯಗಳ ಗತಿ ಏನು?

- ಪು.ಸೂ.ಲಕ್ಷ್ಮೀನಾರಾಯಣ ರಾವ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.