ADVERTISEMENT

ಪೊಲೀಸರ ಪ್ರಭಾವ: ಏನಿದರ ರಹಸ್ಯ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 2 ಮಾರ್ಚ್ 2021, 19:31 IST
Last Updated 2 ಮಾರ್ಚ್ 2021, 19:31 IST

ಮಂಗಳೂರಿನಲ್ಲಿ ವಂಚನೆ ಪ್ರಕರಣವೊಂದರಲ್ಲಿ ವಶಕ್ಕೆ ಪಡೆದಿದ್ದ ಐಷಾರಾಮಿ ಕಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಅಧಿಕಾರಿಗಳು ಅಮಾನತುಗೊಂಡಿದ್ದಾರೆ. ಇದರೊಂದಿಗೆ ಪೊಲೀಸ್
ವ್ಯವಸ್ಥೆಯಲ್ಲಿ ಡಕಾಯಿತಿ, ಸುಲಿಗೆ ಮನಃಸ್ಥಿತಿಯ ಕೆಲವು ಅಧಿಕಾರಿಗಳು ಇದ್ದಾರೆಂಬುದು ಮತ್ತೊಮ್ಮೆ ಮಗದೊಮ್ಮೆ ಸಾಬೀತಾಗುತ್ತಲೇ ಇದೆ.

ಈ ಹಿಂದೆ ಕೂಡ ಇಂಥದ್ದೇ ಕೃತ್ಯವನ್ನು ಹೋಲುವ ಹಲವಾರು ಪ್ರಕರಣಗಳು ಪೊಲೀಸ್ ಅಧಿಕಾರಿಗಳಿಂದ ನಡೆದಿರುವುದು ಬೆಳಕಿಗೆ ಬಂದಿದ್ದವು. ವ್ಯವಸ್ಥೆಯಲ್ಲಿ ದಕ್ಷತೆ ಕುಸಿದಿರುವುದು ಮತ್ತು ಏನು ಮಾಡಿದರೂ ಹಣ, ಪ್ರಭಾವ ಬಳಸಿ ಪಾರಾಗಬಹುದು ಎಂಬ ಬಲವಾದ ನಂಬಿಕೆ ಹುಸಿಯಾಗದಿರುವುದೇ ಈ ರೀತಿಯ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿರಬಹುದು. ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾದ ಉದಾಹರಣೆಗಳೇ ಇಲ್ಲ. ಏನಿದರ ರಹಸ್ಯ?

-ರಿಪ್ಪನ್‌ಪೇಟೆ ನಟರಾಜ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.