ಚುನಾವಣೆಗೂ ಮುನ್ನ ಅವರೆಂದರು
ಗೆಲ್ಲಿಸಿದರೆ ನನ್ನನ್ನು
ನಿಮ್ಮೂರಿಗೆ ಬರುವುವು
ಟಾಯ್ಲೆಟ್ಟು, ನೀರು, ರಸ್ತೆಗೆ ಟಾರು.
ಗೆದ್ದು ಗದ್ದುಗೆಯೇರಿ ತಿರುಗಿಯೂ
ನೋಡದವರ ಕೇಳಿದರೆ ಅನ್ನುವರು
ಹದಗೆಟ್ಟ ನಿಮ್ಮೂರ ರಸ್ತೆಯಲಿ
ಬರಲಾಗದು ನನ್ನ ಕಾರು.
- ರಾಘವೇಂದ್ರ ಈ. ಹೊರಬೈಲು,ಬಟ್ಲಹಳ್ಳಿ, ಚಿಂತಾಮಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.