ADVERTISEMENT

ಪ್ರಾಣಿಗಳಿಗೂ ವೈಯಕ್ತಿಕ ಬದುಕಿದೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 18:21 IST
Last Updated 16 ಜನವರಿ 2020, 18:21 IST

ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ರಾತ್ರಿ ಸಫಾರಿ ನಡೆಸಲು ಚಿಂತನೆ ನಡೆದಿದೆ ಎಂಬ ವರದಿ (ಪ್ರ.ವಾ., ಜ. 15) ಓದಿದೆ. ಹುಲಿ, ಸಿಂಹಗಳು ದೊಡ್ಡ ಬೆಕ್ಕುಗಳ ಜಾತಿಗೆ ಸೇರಿದ ಜೀವಿಗಳಾಗಿದ್ದು ಹಗಲಿಗಿಂತ ರಾತ್ರಿಯಲ್ಲಿ ಹೆಚ್ಚು ಚಟುವಟಿಕೆಯಿಂದ ಇರುತ್ತವೆ. ಈ ವೇಳೆಯಲ್ಲಿ ಸಫಾರಿ ನಡೆಸುವುದು ಸರಿಯಲ್ಲ. ಏಕೆಂದರೆ, ರಾತ್ರಿ ಸಫಾರಿಯಲ್ಲಿ ವಾಹನಗಳ ಬೆಳಕು, ಪ್ರವಾಸಿಗರ ಗದ್ದಲದಂತಹ ಚಟುವಟಿಕೆಗಳು ಹುಲಿ, ಸಿಂಹಗಳಿಗೆ ತೀವ್ರ ಕಿರಿಕಿರಿ ಉಂಟುಮಾಡುತ್ತವೆ. ನೂರಾರು ಕಿ.ಮೀ. ವ್ಯಾಪ್ತಿಯಲ್ಲಿ ಬದುಕುವ ಜೀವಿಗಳನ್ನು ಹಿಡಿದು ತಂದು, ಕೆಲವಾರು ಮೀಟರ್‌ಗಳ ವ್ಯಾಪ್ತಿಯೊಳಗೆ ಬಂಧಿಸಿಟ್ಟು, ಅವುಗಳನ್ನು ನೋಡಿ (ವಿಕೃತ) ಖುಷಿಪಡುವುದು ಸಾಕು. ಅವುಗಳ ಅಳಿದುಳಿದ ವೈಯಕ್ತಿಕ ಬದುಕನ್ನೂ ಕಸಿಯುವ ಯೋಜನೆಗಳು ಬೇಡ.

-ಮಹೇಶ್ವರ ಹುರುಕಡ್ಲಿ,ಬಾಚಿಗೊಂಡನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT