ADVERTISEMENT

ಅಪಮಾನ ಸಲ್ಲದು

ಆರ್.ವೆಂಕಟರಾಜು, ಬೆಂಗಳೂರು
Published 15 ಅಕ್ಟೋಬರ್ 2018, 16:30 IST
Last Updated 15 ಅಕ್ಟೋಬರ್ 2018, 16:30 IST

‘ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ತಯಾರಿಸಿರುವ, ಡಾ. ಬಿ.ಎಲ್. ವೇಣು ಅವರನ್ನು ಕುರಿತ ಸಾಕ್ಷ್ಯಚಿತ್ರದಲ್ಲಿ ರಂಗಕರ್ಮಿ ಡಾ. ಬಿ.ವಿ. ವೈಕುಂಠ ರಾಜು ಅವರ ವ್ಯಕ್ತಿತ್ವಕ್ಕೆ ಕುಂದುಂಟಾಗುವಂಥ ಸನ್ನಿವೇಶವಿದೆ’ ಎಂದು ಅಖಿಲ ಭಾರತ ಕ್ಷತ್ರಿಯ ಸಭಾದವರು ಆಕ್ಷೇಪಿಸಿದ್ದಲ್ಲದೆ ಅದನ್ನು ಸರಿಪಡಿಸುವಂತೆ ಕಾರ್ಯಕ್ರಮವೊಂದರಲ್ಲಿ ಅಕಾಡೆಮಿಯನ್ನು ಆಗ್ರಹಿಸಿದ್ದಾರೆ.

ಅಂದಿನ ಕಾರ್ಯಕ್ರಮವನ್ನು ನಾನು ನಿರ್ವಹಣೆ ಮಾಡಿದ್ದೆ. ಆದ್ದರಿಂದ ವೈಕುಂಠರಾಜು ಅವರ ಅಭಿಮಾನಿಗಳು ಮತ್ತು ಹಿತೈಷಿಗಳನೇಕರು ಈ ಬಗ್ಗೆ ಅಕಾಡೆಮಿಯ ಅಧ್ಯಕ್ಷರ ವಿವರಣೆಯನ್ನು ಪಡೆಯಲು ನನ್ನನ್ನು ಒತ್ತಾಯಿಸಿದ್ದರು. ಆ ಕಾರಣಕ್ಕೆ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಅವರು ಸಾಕ್ಷ್ಯಚಿತ್ರವನ್ನು ಸಮರ್ಥಿಸಿಕೊಂಡರು.

ಒಬ್ಬ ಸಾಧಕನ ವ್ಯಕ್ತಿತ್ವವನ್ನು ತಿಳಿಸುವ ಸಾಕ್ಷ್ಯಚಿತ್ರದಲ್ಲಿ ಮತ್ತೊಬ್ಬ ಸಾಧಕನಿಗೆ ಅವಮಾನ ಮಾಡಬಾರದಲ್ಲವೇ. ಒಂದುವೇಳೆ ಹಾಗೇನಾದರೂ ಆದರೆ ಆ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಎಲ್ಲರಿಗೂ ಇರುವುದಿಲ್ಲವೇ? ಮತ್ತು ಇಂಥ ಸಾಕ್ಷ್ಯಚಿತ್ರಗಳು ಜನರಿಗೆ ಕೊಡುವ ಸಂದೇಶ ಎಂಥದ್ದು?

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.