ADVERTISEMENT

ಇವು ಈಗ ಪ್ರಸ್ತುತವೇ?

ವೆಂಕಟೇಶ ಮಾಚಕನೂರ
Published 16 ಅಕ್ಟೋಬರ್ 2018, 16:59 IST
Last Updated 16 ಅಕ್ಟೋಬರ್ 2018, 16:59 IST

‘ಕರವೇ ಕಚೇರಿ ದ್ವಂಸ’ (ಪ್ರ.ವಾ. ಅ. 16) ಸುದ್ದಿ ಓದಿ ಅಚ್ಚರಿ ಅನಿಸಲಿಲ್ಲ. ಪರಸ್ಪರ ದ್ವೇಷ ಕಾರುವ ಇಂತಹ ಸುದ್ದಿಗಳು ಆಗಾಗ ವರದಿಯಾಗುತ್ತಲೇ ಇವೆ. ಇವುಗಳ ಕನ್ನಡ ಉದ್ಧಾರದ ಕಾರ್ಯ ಎಂದೋ ಮುಗಿದಿದೆ. ಈಗ ಪರಸ್ಪರ ದ್ವೇಷ, ಧ್ವಂಸದ ಕಾರ್ಯ ಆರಂಭವಾಗಿದೆ. ಮತ್ತೊಂದೆಡೆ, ಕನ್ನಡವು ಕರ್ನಾಟಕದಲ್ಲಿಯೇ ಮೂಲೆ ಸೇರುತ್ತಿರುವಾಗ, ಸರ್ಕಾರಪೋಷಿತ ಕನ್ನಡಪರ ಸಂಘ– ಸಂಸ್ಥೆಗಳು ವಿದೇಶಗಳಲ್ಲಿ ಕನ್ನಡದ ಹೆಸರಿನಲ್ಲಿ ಆಡಂಬರದ ಮೆರವಣಿಗೆ ನಡೆಸುತ್ತಿವೆ. ಶಾಲೆಗಳಲ್ಲಿ ಉಳಿಯದ ಕನ್ನಡವನ್ನು ಸಮಾರಂಭ, ಸಮ್ಮೇಳನ, ಉತ್ಸವಗಳ ಮೂಲಕ ಉಳಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ. ಆದ್ದರಿಂದ ಕನ್ನಡಪರ ಸಂಘ– ಸಂಸ್ಥೆಗಳ ಅಸ್ತಿತ್ವದ ಅವಶ್ಯಕತೆ ಇದೆಯೇ ಎಂಬುದು ಮೂಲ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.