ADVERTISEMENT

ಸೋಲು– ಗೌರವ!

ರಮಾನಂದ ಶರ್ಮಾ, ಬೆಂಗಳೂರು
Published 13 ಆಗಸ್ಟ್ 2018, 19:30 IST
Last Updated 13 ಆಗಸ್ಟ್ 2018, 19:30 IST

ಆಟದಲ್ಲಿ ಸೋಲು– ಗೆಲುವು ಸ್ವಾಭಾವಿಕ. ಗೆಲುವು ಶಾಶ್ವತವಲ್ಲ, ಹಾಗೆಂದು ಸೋಲು ನಿರಂತರವಾಗಿ ಇರಬಾರದು. ಸೋಲು– ಗೆಲುವು ಯಾವುದೇ ಇದ್ದರೂ ಅದು ಗೌರವಯುತವಾಗಿರಬೇಕು.

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟೆಸ್ಟ್‌ ಕ್ರಿಕೆಟ್ ಸರಣಿಯಲ್ಲಿ ಭಾರತದ ಪ್ರದರ್ಶನವು ದೇಶದ ಕ್ರಿಕೆಟ್ ಪ್ರೇಮಿಗಳನ್ನು ಕಂಗೆಡಿಸಿದೆ. ನಮ್ಮ ತಂಡದ ಪ್ರದರ್ಶನವನ್ನು ನೋಡಿದರೆ, ಭಾರತದ ಕ್ರಿಕೆಟ್‌ನ ಭವಿಷ್ಯಕ್ಕಾಗಿ ಮತ್ತು ಮುಂಬರುವ ವಿಶ್ವಕಪ್ ಅನ್ನು ದೃಷ್ಟಿಯಲ್ಲಿಟ್ಟು, ಕೆಲವು ಆಟಗಾರರು ಮತ್ತು ಕೋಚ್‌ ಅನ್ನು ಬದಲಿಸುವುದು ಅಗತ್ಯ ಎಂಬ ಭಾವನೆ ಮೂಡುತ್ತಿದೆ.

ಕೆ.ಎಲ್‌. ರಾಹುಲ್‌ ಅವರಲ್ಲಿ ಇನ್ನೊಬ್ಬ ರಾಹುಲ್‌ ದ್ರಾವಿಡ್‌ ಅವರನ್ನು ಹುಡುಕುತ್ತಿದ್ದ ಕರ್ನಾಟಕದ ಜನರಿಗಂತೂ ತೀವ್ರ ನಿರಾಸೆಯಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.