ADVERTISEMENT

ವಾಚಕರ ವಾಣಿ | ಎಲ್ಲ ಸಮಸ್ಯೆಗಳ ಮೂಲ ರಾಜಕಾರಣಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 16 ಫೆಬ್ರುವರಿ 2022, 19:45 IST
Last Updated 16 ಫೆಬ್ರುವರಿ 2022, 19:45 IST

ಹಿಜಾಬ್– ಕೇಸರಿ ಶಾಲು ವಿವಾದದ ಮೂಲವನ್ನು ವೈ.ಗ.ಜಗದೀಶ್ ತಮ್ಮ ಲೇಖನದಲ್ಲಿ (ಪ್ರ.ವಾ., ಫೆ. 16) ಒಂದಿಷ್ಟು ಅನಾವರಣಗೊಳಿಸಿದ್ದಾರೆ. ಆದರೆ ಹಿಜಾಬ್ ಹಾಕಬೇಕೇ ಬೇಡವೇ ಎಂಬುದು ಆಯಾ ವಿದ್ಯಾರ್ಥಿನಿಯ ಅಥವಾ ಮಹಿಳೆಯ ಆಯ್ಕೆಗೆ ಬಿಟ್ಟ ವಿಷಯ ಎಂದಿದ್ದಾರೆ. ಯಾವುದೇ ಪ್ರಮುಖವಾದ ನಿರ್ಧಾರವನ್ನು–ವಿಷಯ ಕೌಟುಂಬಿಕವಾಗಲೀ ಸಾಮಾಜಿಕವಾಗಲೀ- ಮಹಿಳೆಯ ನಿರ್ಧಾರಕ್ಕೆ ಬಿಡುವುದನ್ನು ಪುರುಷಾಧಿಪತ್ಯ ಒಪ್ಪುವು ದಿಲ್ಲ. ಕುಟುಂಬದಲ್ಲೂ ಈ ನಿರ್ಧಾರ ಪುರುಷರದೇ ಆಗಿರುತ್ತದೆ. ನಂತರ ಅವರವರ ಕೋಮಿನ ಧಾರ್ಮಿಕ ನಾಯಕರು, ನಂತರ ಧರ್ಮಸೂಕ್ಷ್ಮದ ವಿಷಯವೆತ್ತಿ ರಾಜಕಾರಣಿಗಳು ಮೂಗು ತೂರಿಸುತ್ತಾ ಇರುತ್ತಾರೆ.

ಈ ಎಲ್ಲಾ ಸಮಸ್ಯೆಗಳ ಮೂಲ ಕಾರಣ ರಾಜಕಾರಣಿಗಳು. ಅಧಿಕಾರಕ್ಕಾಗಿ, ತಮ್ಮ ಪ್ರಾಬಲ್ಯಕ್ಕಾಗಿ ಜನರಲ್ಲಿ ವಿಷಬೀಜ ಬಿತ್ತಿ, ಆತಂಕ ಮೂಡಿಸಲು ಯಾವ ಮಟ್ಟಕ್ಕಾದರೂ ಇಳಿಯಲು ಅವರು ಪಕ್ಷಭೇದವಿಲ್ಲದೆ ಅವಕಾಶವನ್ನು ಹುಡುಕುತ್ತಿರುತ್ತಾರೆ. ಎಲ್ಲಿ ಬೆಂಕಿ ಹಚ್ಚಿದರೆ ತಮ್ಮ ಬೇಳೆ ಬೇಯುತ್ತದೆ ಎಂದು ಕಾಯುತ್ತಿರುತ್ತಾರೆಯೇ ವಿನಾ ಅವರು ಯಾರ ಉದ್ಧಾರವನ್ನೂ ಮಾಡುವುದಿಲ್ಲ. ಕೆಟ್ಟ ರಾಜಕೀಯ ಮಾಡುವವರೇ ಎಲ್ಲೆಡೆ ತುಂಬಿದ್ದಾರೆ.

ಇವರ ನಡುವೆ ಉತ್ತಮ ರಾಜಕಾರಣ ಮಾಡುವವರು ಎಲ್ಲಿದ್ದಾ ರೆಂದು ಹುಡುಕಬೇಕಾಗಿದೆ. ಶತಶತಮಾನಗಳಿಂದ ಅಲ್ಪಸಂಖ್ಯಾತ ಹೆಣ್ಣುಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಸಾಧ್ಯವೇ ಇರಲಿಲ್ಲ. ಕೆಲ ದಶಮಾನಗಳಿಂದೀಚೆಗೆ ಅವರಿಗೆ ಇದು ಸಾಧ್ಯವಾಗುತ್ತಿದೆ. ಆ ಸಮುದಾಯದ ಹೆಣ್ಣು ಮಕ್ಕಳು ಇದನ್ನು ಅರ್ಥಮಾಡಿಕೊಂಡು ಧಾಡಸಿತನದಿಂದ ಮುಂದುವರಿಯಬೇಕಿತ್ತು. ಆದರೆ ಯಾರು ಅವರಿಗೆ ತಿಳಿಹೇಳುವವರು?ವಿಶಾಲಾಕ್ಷಿ ಶರ್ಮಾ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT