ADVERTISEMENT

ವಾಚಕರ ವಾಣಿ | ಪರೋಕ್ಷವಾಗಿ ಒಪ್ಪಿದಂತೆ ಅಲ್ಲವೇ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 15 ಜೂನ್ 2022, 20:00 IST
Last Updated 15 ಜೂನ್ 2022, 20:00 IST

‘ಉತ್ತರಪ್ರದೇಶದ ಮಾದರಿಯಲ್ಲಿ ಬುಲ್ಡೋಜರ್ ಅಸ್ತ್ರವನ್ನು ಪ್ರಯೋಗಿಸುವಂತಹ ಪರಿಸ್ಥಿತಿ ರಾಜ್ಯದಲ್ಲಿ ಇಲ್ಲ. ಕರ್ನಾಟಕದಲ್ಲಿ ಸಂವಿಧಾನ ಹಾಗೂ ಕಾನೂನುಗಳ ಪಾಲನೆ ನಡೆಯುತ್ತಿದೆ. ದೇಶದ ಕಾನೂನು ಎಲ್ಲರಿಗೂ ಒಂದೇ’ ಎಂದು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುವಾಗ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ (ಪ್ರ.ವಾ., ಜೂನ್ 15). ಹಾಗಾದರೆ ಉತ್ತರಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ಸಂವಿಧಾನ ಹಾಗೂ ಕಾನೂನುಗಳನ್ನು ಪಾಲನೆ ಮಾಡುತ್ತಿಲ್ಲ ಎಂಬುದು ತಾನೇ ಇದರರ್ಥ?

ಬಿಜೆಪಿಯ ಮಾಜಿ ವಕ್ತಾರೆ ನೂಪೂರ್ ಶರ್ಮಾ, ಪ್ರವಾದಿ ಮಹಮ್ಮದ್ ಅವರ ಬಗ್ಗೆ ನೀಡಿದ್ದ ಅವಹೇಳನಕಾರಿ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಿದವರ ಮನೆಗಳನ್ನು ನೆಲಸಮ ಮಾಡುವುದಲ್ಲದೆ ಪ್ರತಿಭಟನಕಾರರನ್ನು ಬಂಧಿ ಸಿರುವ ಉತ್ತರಪ್ರದೇಶ ಸರ್ಕಾರವನ್ನು ನಾಡಿನ ಬಹುಸಂಖ್ಯಾತರು ಖಂಡಿಸುತ್ತಿದ್ದಾರೆ. ಈ ವೇಳೆಯಲ್ಲಿ ರಾಜ್ಯ ಗೃಹ ಸಚಿವರು ತಮ್ಮದೇ ಪಕ್ಷ ಆಡಳಿತ ನಡೆಸುತ್ತಿರುವ ಉತ್ತರಪ್ರದೇಶದಲ್ಲಿ ‘ಸಂವಿಧಾನ ಹಾಗೂ ಕಾನೂನುಗಳ ಪಾಲನೆ ಆಗುತ್ತಿಲ್ಲ’ ಎಂಬುದನ್ನು ಪರೋಕ್ಷವಾಗಿ ಹೇಳಿರುವುದು ಸ್ವಾಗತಾರ್ಹ.

- ಡಿ.ಸಿ.ಪ್ರಕಾಶ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.