ADVERTISEMENT

ವಾಚಕರ ವಾಣಿ | ಬೆತ್ತಲೆ ಸ್ಥಿತಿ ಅಪಹಾಸ್ಯ ಮಾಡುವ ಕಠೋರ ವ್ಯಂಗ್ಯ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 18 ಆಗಸ್ಟ್ 2021, 19:46 IST
Last Updated 18 ಆಗಸ್ಟ್ 2021, 19:46 IST

ಆಗಸ್ಟ್ ಹದಿನೈದರಂದು ನನ್ನ ವಾಟ್ಸ್‌ಆ್ಯಪ್‌ ಖಾತೆಗೆ ಸ್ನೇಹಿತರು ಒಂದು ಫೋಟೊ ಕಳಿಸಿದ್ದರು. ಹರಿದ ಬಟ್ಟೆಯ ಅರೆ ಬೆತ್ತಲೆಯ ಎಂಟು– ಹತ್ತು ಬಡ ಹುಡುಗರು ಭಾರತೀಯ ಧ್ವಜದ ಸುತ್ತ ನಿಂತು ಧ್ವಜವಂದನೆ ಸಲ್ಲಿಸುವ ಚಿತ್ರ ಅದು. ಆ ಹುಡುಗರಲ್ಲಿ ಐದಾರು ವರ್ಷ ವಯಸ್ಸಿನ ಹುಡುಗನೊಬ್ಬ ಸಂಪೂರ್ಣ ಬೆತ್ತಲೆ ಇದ್ದ. ಆ ಫೋಟೊ ನೋಡಿ ನನಗೆ ಕವಿ ಸಿದ್ಧಲಿಂಗಯ್ಯ ಅವರ ‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ’ ಕವಿತೆ ನೆನಪಿಗೆ ಬಂದು, ಈ ಸಾಲುಗಳೊಡನೆ ಚಿತ್ರವನ್ನು ಕೆಲವು ಗೆಳೆಯರಿಗೆ ಕಳುಹಿಸಿದೆ.

ಆ ಚಿತ್ರ ಫೇಸ್‌ಬುಕ್‌ನಲ್ಲಿಯೂ ಹರಿದಾಡತೊಡಗಿದಾಗ ಅಲ್ಲಿಯೂ ಕೆಲವು ಗೆಳೆಯರಿಗೆ ಕಳಿಸತೊಡಗಿದೆ. ಕೂಡಲೇ ಫೇಸ್‌ಬುಕ್‌ ಕಡೆಯಿಂದ ನನಗೆ ನೋಟಿಸ್ ಬಂತು.

‘You can't post or comment for seven days. This is because eight of your previous posts didn't follow our community standards on nudity or sexual activity’.

ADVERTISEMENT

ಈ ತೀರ್ಮಾನವನ್ನು ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ತೆಗೆದುಕೊಂಡಿರಬಹುದು. ಆದರೆ ಈ ತಂತ್ರಜ್ಞಾನಕ್ಕೆ ಎಲ್ಲ ನಿಯಮಾವಳಿಗಳನ್ನು ತುಂಬಿಸಿದವರು ಮನುಷ್ಯರು ತಾನೇ? ಇದರ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗದರ್ಶನ ಇದೆ ತಾನೇ? ಈ ಫೋಟೊ ಯಾವ ರೀತಿ ಲೈಂಗಿಕತೆ ಧ್ವನಿಸುತ್ತದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಬಡ ಮಕ್ಕಳ ಅರೆ ಬೆತ್ತಲೆ, ಬೆತ್ತಲೆ ಸ್ಥಿತಿಯನ್ನು ಅಪಹಾಸ್ಯ ಮಾಡುವ ಕಠೋರ ವ್ಯಂಗ್ಯವೇ ಈ ಸೂಚನೆಯಲ್ಲಿ ಕಾಣುತ್ತಿರುವ
ಸತ್ಯ.

- ಪ್ರೊ. ಕೆ.ಮರುಳಸಿದ್ದಪ್ಪ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.