ADVERTISEMENT

ವಾಚಕರ ವಾಣಿ | ಮಾಹಿತಿ ಸೋರಿಕೆ: ಕ್ಷಿಪ್ರ ತನಿಖೆ ಅಗತ್ಯ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 18 ಫೆಬ್ರುವರಿ 2022, 20:00 IST
Last Updated 18 ಫೆಬ್ರುವರಿ 2022, 20:00 IST

ಷೇರು ಹೂಡಿಕೆದಾರರಿಗೆ ದಲ್ಲಾಳಿಗಳು ಅಥವಾ ಕಂಪನಿಗಳಿಂದ ಅನ್ಯಾಯವಾದಾಗ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರಕ್ಕೆ ದೂರು ಸಲ್ಲಿಸಬಹುದು. ಆದರೆ ಅಲ್ಲಿಯ ಮಾಜಿ ವ್ಯವಸ್ಥಾಪಕ ನಿರ್ದೇಶಕಿಯೊಬ್ಬರು ಹಿಮಾಲಯದ ಯೋಗಿಯೊಬ್ಬರ ಜೊತೆ ಅತಿ ದೊಡ್ಡ ಷೇರು ಮಾರುಕಟ್ಟೆಯ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಂಡಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಹ ಆತಂಕಕಾರಿ ವಿಷಯವಾಗಿದೆ.

ಹೂಡಿಕೆದಾರರಿಗೆ ಆಗಾಗ ಮಾರ್ಗದರ್ಶನ ಮಾಡುವ, ಪಾಠ ಹೇಳುವ ಸಂಸ್ಥೆಯ ಕಾರ್ಯಾಚರಣೆಯ ಬಗ್ಗೆಯೂ ನಿರಂತರವಾಗಿ ಆಮೂಲಾಗ್ರ ಪರಿಶೋಧನೆ ಮಾಡುತ್ತಿದ್ದರೆ ಮಾತ್ರ ಹೂಡಿಕೆದಾರರ ವಿಶ್ವಾಸವನ್ನು ಉಳಿಸಿಕೊಳ್ಳಲು ಸಾಧ್ಯ. ಭಾರತೀಯ ಜೀವ ವಿಮಾ ನಿಗಮದ ಬಹು ನಿರೀಕ್ಷಿತ, ಪ್ರತಿಷ್ಠಿತ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಬರುತ್ತಿರುವ ಈ ಮಹತ್ತರ ಘಟ್ಟದಲ್ಲಿ ಮೇಲಿನ ಪ್ರಕರಣದ ಕ್ಷಿಪ್ರ ತನಿಖೆ ನಡೆದು, ಆರೋಪಿಗಳಿಗೆ ಕೂಡಲೇ ಶಿಕ್ಷೆಯಾಗುವುದು ಅತ್ಯಗತ್ಯ.

ಭರತ್ ಬಿ.ಎನ್., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT