ADVERTISEMENT

ದುಡಿಯುವವನ ಮೈ ಬಗ್ಗಿಯೇ ಇರುತ್ತದೆ!

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 17:53 IST
Last Updated 12 ಆಗಸ್ಟ್ 2019, 17:53 IST

ಚಂಡೀಗಡದ ಐಷಾರಾಮಿ ಹೋಟೆಲ್ ಒಂದರಲ್ಲಿ ಎರಡು ಬಾಳೆಹಣ್ಣಿಗೆ ₹ 422 ಬಿಲ್ ಮಾಡಿದ ಸುದ್ದಿ ಮತ್ತು ವಿವಾದ ತಣ್ಣಗಾಗುವ ಮೊದಲೇ, ಮುಂಬೈನ ಪಂಚತಾರಾ ಹೋಟೆಲೊಂದು ಎರಡು ಮೊಟ್ಟೆಗೆ ₹ 1,700 ಬಿಲ್ ಮಾಡಿದ ಸುದ್ದಿ ವೈರಲ್ ಆಗಿದೆ. ಈ ಬಿಲ್‌ನ ಹಿಂದಿನ ಕಥೆ ಮತ್ತು ವಿವರಣೆ ಏನೇ ಇರಲಿ, ಬಾಳೆಹಣ್ಣು ಬೆಳೆಯುವವನಾಗಲೀ ಅಥವಾ ಮೊಟ್ಟೆ ಉತ್ಪಾದಿಸುವವನಾಗಲೀ ಇದರಲ್ಲಿ ಗಳಿಸಿದ್ದು ಅಷ್ಟರಲ್ಲಿಯೇ ಇದೆ. ಇದರಲ್ಲಿ ತೆರಿಗೆ ಇಲಾಖೆ ಮತ್ತು ಮಧ್ಯವರ್ತಿಗಳ ಹೊಟ್ಟೆ ಬಿರಿಯುವಷ್ಟು ತುಂಬಿದ್ದಂತೂ ಸತ್ಯ.

ಈ ಸುದ್ದಿ ಕೇಳಿ, ಕೈತುಂಬಾ ಸಂಬಳ ಪಡೆಯುವವರು ತಮ್ಮ ಕೆಲಸವನ್ನು ಬಿಟ್ಟು ಬಾಳೆಹಣ್ಣು ಕೃಷಿಗೆ ಮತ್ತು ಮೊಟ್ಟೆ ವ್ಯಾಪಾರಕ್ಕೆ ಧುಮುಕದಿದ್ದರೆ ಸಾಕು. ಈ ದೇಶದಲ್ಲಿ ಮೈಬಗ್ಗಿ ದುಡಿಯುವವನ ಮೈ ಹೇಗೆ ಬಗ್ಗಿಯೇ ಇರುತ್ತದೆ ಎನ್ನುವುದಕ್ಕೆ ಇದು ಇನ್ನೊಂದು ಸಾಕ್ಷಿ.

ರಮಾನಂದ ಶರ್ಮಾ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.