ADVERTISEMENT

ವಾಚಕರ ವಾಣಿ: ಅಸಲಿ ನೋಟಿನ ನಕಲಿ ರೂಪ!

​ಪ್ರಜಾವಾಣಿ ವಾರ್ತೆ
Published 31 ಮೇ 2022, 19:30 IST
Last Updated 31 ಮೇ 2022, 19:30 IST

‘ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ದೇಶದಲ್ಲಿ ಒಟ್ಟು 2.30 ಲಕ್ಷ ನಕಲಿ ನೋಟುಗಳು ಪತ್ತೆಯಾಗಿವೆ’ ಎಂದು ಆರ್‌ಬಿಐ ವಾರ್ಷಿಕ ವರದಿ ತಿಳಿಸಿದೆ (ಪ್ರ.ವಾ., ಮೇ 31). ಇನ್ನೂ ಪತ್ತೆಯಾಗದ ಇಂತಹ ನೋಟುಗಳು ಎಷ್ಟಿವೆಯೋ? 2016ರಲ್ಲಿ ಕೇಂದ್ರ ಸರ್ಕಾರವು ನಕಲಿ ನೋಟು ಹಾಗೂ ಕಪ್ಪುಹಣಕ್ಕೆ ಕಡಿವಾಣ ಹಾಕಲೆಂದು ₹ 500 ಹಾಗೂ ₹ 1,000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿತ್ತು. ನಿಗದಿತ ದಿನಾಂಕದವರೆಗೂ ನಾಗರಿಕರು ಹಳೆಯ ನೋಟುಗಳನ್ನು ಬದಲಾಯಿಸಿಕೊಂಡರು. ///ಆದರೆ ಕೇಂದ್ರ ಸರ್ಕಾರವಾಗಲೀ, ಆರ್‌ಬಿಐ ಆಗಲೀ ಆವರೆಗೆ ಮುದ್ರಣಗೊಂಡಿದ್ದ ಎಲ್ಲ ನೋಟುಗಳೂ ಹಿಂದೆ ಬಂದಿವೆ ಎಂದು ಇದುವರೆಗೂ ಸರಿಯಾದ ಮಾಹಿತಿ ನೀಡಿಲ್ಲ!///

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕಂತೆ ಕಂತೆ ಹಣ ನಂತರದ ದಿನಗಳಲ್ಲೂ ಸಿಕ್ಕಿದೆ. ರದ್ದಾಗಿರುವ ನೋಟುಗಳು ಈಗಲೂ ದೇವಸ್ಥಾನದ ಹುಂಡಿಗಳಲ್ಲಿ ಕಾಣಿಕೆ ರೂಪದಲ್ಲಿ ಪ್ರತ್ಯಕ್ಷವಾಗುತ್ತಿವೆ. ಮುಖ್ಯವಾಗಿ ಇವೇನೂ ನಕಲಿ ನೋಟುಗಳಲ್ಲ. ತೆರಿಗೆ ತಪ್ಪಿಸಿ ಕೂಡಿಟ್ಟ, ಆದರೆ ರದ್ದುಗೊಂಡಿರುವ ಅಸಲಿ ನೋಟುಗಳೇ! ಇದರಿಂದ ನೋಟು ರದ್ದಾಗಿದ್ದಕ್ಕೆ ಅರ್ಥವೇ ಇಲ್ಲದಂತಾಯಿತು. ಇನ್ನು ನಗದುರಹಿತ ವ್ಯವಹಾರ ಎಂದು ಸರ್ಕಾರ ಹೇಳುತ್ತಿದ್ದರೂ ಗ್ರಾಮೀಣ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆ, ಸರ್ವರ್ ಸಮಸ್ಯೆ, ಅನಕ್ಷರಸ್ಥರು ನಗದುರಹಿತ ವ್ಯವಹಾರಕ್ಕೆ ಒಗ್ಗದೇ ಇರುವುದು ಪ್ರಮುಖ ಸಮಸ್ಯೆಗಳೇ ಆಗಿವೆ.

- ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.