ADVERTISEMENT

ಪ್ರಾದೇಶಿಕ ಅಸಮಾನತೆ ಬಗ್ಗೆ ಅಸೀಮ ನಿರ್ಲಕ್ಷ್ಯ!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 5 ಜನವರಿ 2022, 20:15 IST
Last Updated 5 ಜನವರಿ 2022, 20:15 IST

ನೀತಿ ಆಯೋಗದ ‘ಬಹು ಆಯಾಮದ ಬಡತನ ಸೂಚ್ಯಂಕ ವರದಿ’ಯು (ಪ್ರ.ವಾ., ಜ. 5) ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ, ಮುಖ್ಯವಾಗಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಬಹು ಆಯಾಮದ ಬಡತನ ಅಧಿಕ ಮಟ್ಟದಲ್ಲಿರುವುದನ್ನು ಸಚಿತ್ರವಾಗಿ ದಾಖಲಿಸಿದೆ. ‘ಪ್ರಾದೇಶಿಕ ಅಸಮಾನತೆ’ ಕುರಿತ ತಾರತಮ್ಯದ ಬಗ್ಗೆಯೂ ವರದಿಯು ಬೊಟ್ಟು ಮಾಡಿ ತೋರಿಸಿದೆ. ಇದರ ಜೊತೆಗೆ ‘ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ– 5’ರಲ್ಲಿ (2019- 20) ಮಕ್ಕಳು ಮತ್ತು ಮಹಿಳೆಯರಲ್ಲಿ ಅನೀಮಿಯ (ರಕ್ತಹೀನತೆ/ಅಪೌಷ್ಟಿಕತೆ) ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಅತ್ಯಧಿಕ ಮಟ್ಟದಲ್ಲಿರುವುದನ್ನು ಗಮನಿಸಬೇಕಾಗಿದೆ.

ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವಾಗ, ಮಕ್ಕಳು ಮತ್ತು ಮಹಿಳೆಯರಲ್ಲಿನ ತೀವ್ರ ಪ್ರಮಾಣದ ಅನೀಮಿಯ ಮತ್ತು ಅತ್ಯಧಿಕ ಮಟ್ಟದಲ್ಲಿರುವ ಬಹುಆಯಾಮದ ಬಡತನದ ಬಗ್ಗೆ ಸಂಬಂಧಿಸಿದ ಶಾಸಕರು ಮತ್ತು ಮಂತ್ರಿಗಳು ಚಕಾರವೆತ್ತಿಲ್ಲ. ಇದನ್ನು ಚಳವಳಿಯ ಮೂಲಕವೇ ಸರ್ಕಾರದ ಗಮನಕ್ಕೆ ತರಬೇಕಾಗುತ್ತದೇನೋ! ಈಗಲಾದರೂ ಸರ್ಕಾರವು ಕಣ್ಣು ತೆರೆದು ಇಂತಹ ಬಹುಜನರ- ಬಹುಆಯಾಮದ ದುಃಸ್ಥಿತಿಯ ಬಗ್ಗೆ ಕ್ರಮ ತೆಗೆದುಕೊಳ್ಳುವ ಪ್ರಯತ್ನ ಮಾಡಲಿ.

- ಟಿ.ಆರ್.ಚಂದ್ರಶೇಖರ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.