ADVERTISEMENT

ಮರುವಿಮರ್ಶೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 8 ಜುಲೈ 2018, 20:07 IST
Last Updated 8 ಜುಲೈ 2018, 20:07 IST

ಕನ್ನಡ ಚಲನಚಿತ್ರಗಳನ್ನು ಕುರಿತು ವಿಧಾನ ಪರಿಷತ್ತಿನಲ್ಲಿ ನಡೆದ ಚರ್ಚೆ (ಪ್ರ.ವಾ., ಜುಲೈ 3) ಗಮನಿಸಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಸನ್ಮಾನಿಸಿದ್ದಾರೆ. ಮಂಡಳಿಗೆ ಈಚೆಗಷ್ಟೇ ಚುನಾವಣೆ ನಡೆದಿದೆ. ತಮ್ಮನ್ನು ಭೇಟಿ ಮಾಡಿದ ಅಧ್ಯಕ್ಷರ ನೇತೃತ್ವದ ನಿಯೋಗಕ್ಕೆ ಮುಖ್ಯಮಂತ್ರಿಯವರು ಸಬ್ಸಿಡಿ ಬಾಕಿ ₹ 40 ಕೋಟಿ ಬಿಡುಗಡೆ ಮಾಡುವ ಆಶ್ವಾಸನೆ ನೀಡಿದ್ದಾರೆ. ಕನ್ನಡ ಚಿತ್ರಗಳ ಪ್ರೇಕ್ಷಕರಿಗೆ ಇದರಿಂದ ಏನು ಲಾಭ?

ಚಲನಚಿತ್ರಗಳ ಗುಣಮಟ್ಟದ (ತಾಂತ್ರಿಕ ಅಲ್ಲ) ಬಗ್ಗೆ ಮಂಡಳಿ ಏನೇನೂ ಮಾಡಿಲ್ಲ. ‘ವಿವಿಧ ಸಹಾಯ, ಸವಲತ್ತು, ಪ್ರಶಸ್ತಿ... ನೀಡಿದ್ದೇವೆ. ಆದರೆ ಸುಧಾರಣೆ ಆಗುತ್ತಿಲ್ಲ’ ಎಂದು ಹಿಂದಿನ ಮುಖ್ಯಮಂತ್ರಿ ಒಮ್ಮೆ ಹೇಳಿದ್ದರು.

ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ, ಸದಸ್ಯರ ಆಯ್ಕೆಗೆ ಏನು ಮಾನದಂಡ? ಹಿಂದಿನ ಸರ್ಕಾರದ ‘ಸಂಸ್ಕೃತಿ ನೀತಿ’ ಕಾರ್ಯರೂಪಕ್ಕೆ ಬಂತೇ? ಮುಂದುವರಿಯುವುದೇ? ಸ್ವಜನ ಪಕ್ಷಪಾತ, ಹಿತಾಸಕ್ತಿ ಸಂಘರ್ಷ ನಡೆಯದಂತೆ ನೋಡಿಕೊಳ್ಳುವುದು ಹೇಗೆ?

ADVERTISEMENT

ಸುಮಾರು 15 ವರ್ಷಗಳಿಂದ ಕನ್ನಡ ಚಲನಚಿತ್ರಗಳು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿಲ್ಲ. ದಕ್ಷಿಣ ಭಾರತದಲ್ಲಿ ಕಂಟೆಂಟ್ ದೃಷ್ಟಿಯಿಂದ ಮಲಯಾಳ ಚಿತ್ರೋದ್ಯಮ ಮುಂದಿದೆ. ವಾಣಿಜ್ಯಾತ್ಮಕ ಚಿತ್ರಗಳಲ್ಲಿ ತೆಲುಗು, ತಮಿಳು ಚಿತ್ರಗಳು ಮುಂದಿವೆ. ಇವೆಲ್ಲವನ್ನೂ ನೋಡಿದರೆ ಸಹಾಯಧನ, ಪ್ರಶಸ್ತಿ ವ್ಯವಸ್ಥೆಯನ್ನು ಮರುವಿಮರ್ಶಿಸಬೇಕು ಎಂದೆನಿಸುತ್ತದೆ.

-ಎಚ್.ಎಸ್. ಮಂಜುನಾಥ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.