ADVERTISEMENT

ಅಕಾಡೆಮಿ ಅಧ್ಯಕ್ಷರ ರಾಜೀನಾಮೆ | ಸಾಹಿತಿಗಳೋ ಆಸ್ಥಾನ ಕವಿಗಳೋ?

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 20:08 IST
Last Updated 30 ಜುಲೈ 2019, 20:08 IST

ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಪ್ರಾಧಿಕಾರ, ಅಕಾಡೆಮಿಗಳ ಅಧ್ಯಕ್ಷರು ರಾಜೀನಾಮೆ ಕೊಟ್ಟು ಅದಕ್ಕೆ ತಾತ್ವಿಕ ಕಾರಣಗಳನ್ನು ನೀಡಿರುವರಾದರೂ ಸಾಮಾನ್ಯ ಜನರಿಗೆ ಈ ಕಾರಣಗಳು ತೃಪ್ತಿಕರ ಎನಿಸುವುದಿಲ್ಲ. ಏಕೆಂದರೆ ಇಂದು ಬಲಶಾಲಿಯಾದ ಯಾವ ರಾಜಕೀಯ ಪಕ್ಷವೂ ತತ್ವ ರಾಜಕಾರಣ ಮಾಡುತ್ತಿಲ್ಲ. ಸರ್ಕಾರಗಳು ಪಲ್ಲಟಗೊಂಡಂತೆ ಸಾಹಿತಿಗಳ ಸ್ಥಾನಮಾನಗಳೂ ಹೀಗೆ ಪಲ್ಲಟಗೊಳ್ಳುತ್ತಾ ಹೋದರೆ ಇವರೇನು ಸಾಹಿತಿಗಳೋ ಅಥವಾ ವಿವಿಧ ರಾಜಕೀಯ ಪಕ್ಷಗಳ ಆಸ್ಥಾನ ಕವಿಗಳೋ ಎಂಬ ಅನುಮಾನ ಜನರಿಗೆ ಮೂಡದಿರದು.

ಸರ್ಕಾರ ಯಾವುದೇ ಇರಲಿ, ಕನ್ನಡದ ಕೆಲಸ ಅಬಾಧಿತವಾಗಿ ನಡೆಯುತ್ತಿರಬೇಕು ಎಂಬ ಬದ್ಧತೆ ತೋರಿಸುವ ಸಾಹಿತಿಗಳ ಅಗತ್ಯ ಇಂದು ಕನ್ನಡಕ್ಕಿದೆ. ಅಕಾಡೆಮಿ, ಪ್ರಾಧಿಕಾರಗಳ ಪದಾಧಿಕಾರಿಗಳನ್ನು ರಾಜಕಾರಣಿಗಳು ತಮ್ಮಿಚ್ಛೆಯಂತೆ ಬದಲಾಯಿಸಲು ಸಾಧ್ಯವಾಗದಂತೆ ಕಟ್ಟುನಿಟ್ಟಾದ ಕಾನೂನನ್ನು ರೂಪಿಸಬೇಕಾಗಿದೆ. ಅಂತಹ ಕಾನೂನು ರೂಪುಗೊಂಡು ಜಾರಿಯಾಗುವವರೆಗೂ ಎಲ್ಲ ಸರ್ಕಾರಿ ಸ್ಥಾನಮಾನಗಳಿಂದ ತಾವು ದೂರವಿರುವ ನಿರ್ಧಾರವನ್ನು ಎಲ್ಲ ಸಾಹಿತಿಗಳೂ ಒಮ್ಮತದಿಂದ ಕೈಗೊಂಡಲ್ಲಿ, ಅದು ನಿಜವಾದ ತಾತ್ವಿಕ ಬದ್ಧತೆಯಾಗುತ್ತದೆ.

ಅಚಲವಾದ ತಾತ್ವಿಕ ನಿಷ್ಠೆಯು ಎಂತಹ ಕೋಮುವಾದಿಯ ಮನಸ್ಸನ್ನೂ ಬದಲಾಯಿಸಬಲ್ಲದು. ಗಾಂಧೀಜಿ ಇಂತಹ ಹೃದಯ ಪರಿವರ್ತನೆಯನ್ನು ನಂಬಿದ್ದರು. ಸಾಹಿತಿಗಳು ಇದಾವುದನ್ನೂ ಮಾಡದೆ, ತಮ್ಮ ಅಧಿಕಾರವು ಪುಢಾರಿಗಳ ರಾಜಕೀಯ ಅಧಿಕಾರವನ್ನು ಅವಲಂಬಿಸಿದೆ ಎಂಬಂತೆ ವರ್ತಿಸಿದರೆ, ಜನರು ರಾಜಕಾರಣಿಗಳ ಮೇಲೆ ನಂಬಿಕೆ ಕಳೆದುಕೊಂಡಂತೆ ಇವರ ಮೇಲಿನ ನಂಬಿಕೆಯನ್ನೂ
ಕಳೆದುಕೊಳ್ಳುತ್ತಾರೆ.

ADVERTISEMENT

ಡಾ. ಟಿ.ಎನ್.ವಾಸುದೇವಮೂರ್ತಿ, ಬೆಂಗಳೂರು

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.