ADVERTISEMENT

ರಸ್ತೆ ‍ಪಕ್ಕದ ಮರಗಣತಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 19:30 IST
Last Updated 20 ಜುಲೈ 2020, 19:30 IST

ಅರಣ್ಯ ಇಲಾಖೆಯು ಪ್ರತೀ ವರ್ಷ ರಸ್ತೆಗಳ ಪಕ್ಕ ಸಾಲು ಸಾಲು ಸಸಿಗಳನ್ನು ನೆಡುತ್ತದೆ. ಆದರೆ ರಸ್ತೆಯ ಇಕ್ಕೆಲಗಳಲ್ಲಿ
ಭೂಮಿ ಹೊಂದಿರುವ ಬಹುತೇಕ ರೈತರು ಸರ್ಕಾರದ ಜಾಗವನ್ನು ಆಕ್ರಮಿಸಿಕೊಂಡು, ಅಲ್ಲಿ ನೆಟ್ಟಿರುವ ಸಸಿಗಳನ್ನು ಕಿತ್ತೆಸೆದು, ಉಳುಮೆ ಮಾಡುತ್ತಾರೆ. ಇನ್ನು ಕೆಲವರು ಸಸಿಗಳು ಮರಗಳಾಗುವವರೆಗೆ ಕಾದು, ಆನಂತರ ಅವುಗಳನ್ನು ಕಡಿದು ಸ್ವಂತಕ್ಕೆ ಬಳಸುತ್ತಾರೆ. ಹೀಗಾದಾಗ ಇಲಾಖೆಯ ಪ್ರಯತ್ನ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತದೆ. ಜಿಪಿಎಸ್ ವ್ಯವಸ್ಥೆಯಿಂದ ಇಲಾಖೆಯು ಸುಲಭವಾಗಿ ರಸ್ತೆ ಪಕ್ಕದ ಮರಗಣತಿ ‌ನಡೆಸಬಹುದು. ಯಾವ ಪ್ರದೇಶದಲ್ಲಿ ಸರ್ಕಾರದ ಗಿಡಮರಗಳು ಕಣ್ಮರೆಯಾಗಿವೆಯೋ ಆ ಪ್ರದೇಶದ ವಾರಸುದಾರರಿಗೆ ಸಸಿ ನೀಡಿ, ಅದನ್ನು ಬೆಳೆಸುವ ಕಾರ್ಯದಲ್ಲಿ ಅವರನ್ನೂ ಪಾಲುದಾರರನ್ನಾಗಿ ಮಾಡಬೇಕು. ಮರಗಳನ್ನು ಕಡಿದು ಜೇಬು ತುಂಬಿಸಿಕೊಳ್ಳುತ್ತಿರುವವರನ್ನು ಶಿಕ್ಷೆಗೆ ಗುರಿಪಡಿಸಬೇಕು. ನಾವೇ ಗಿಡಮರಗಳನ್ನು ಕಿತ್ತೆಸೆದು, ಮಳೆ ಬರುತ್ತಿಲ್ಲ ಎಂದು ಆಗಸ ನೋಡುವುದು ಮೂರ್ಖತನವಲ್ಲವೇ?

– ಮಹೇಶ್ವರ ಹುರುಕಡ್ಲಿ,ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT