ADVERTISEMENT

‘ಬಂಗಾರದ ಕಡಲೆ’ಯಾಯಿತೇ ಮರಳು?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 29 ಮೇ 2020, 20:30 IST
Last Updated 29 ಮೇ 2020, 20:30 IST

ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಮಳೆಗಾಲದಲ್ಲಿ ಮರಳು ಗಣಿಗಾರಿಕೆ ನಿಷಿದ್ಧ. ಈ ಹಿಂದೆ ಉಡುಪಿಯ ಶಾಸಕರು ಮರಳಿಗಾಗಿ ಅಹೋರಾತ್ರಿ ಧರಣಿ ನಡೆಸಿ ‘ಸ್ಯಾಂಡ್ ಆ್ಯಪ್’ ಮೂಲಕ ಅಲ್ಪ ಪ್ರಮಾಣದ ಮರಳನ್ನಾದರೂ ಜಿಲ್ಲೆಯ ಜನರಿಗೆ ಒದಗಿಸುವಲ್ಲಿ ಯಶಸ್ವಿಯಾದರು. ಆದರೆ ಜನ ಗೊಂದಲಕ್ಕೀಡಾದರೇ ವಿನಾ ಮರಳಿನ ಅಭಾವ ಕಡಿಮೆಯಾಗಲಿಲ್ಲ. ಅದೆಷ್ಟೋ ಮನೆ, ಕಟ್ಟಡಗಳ ಕಾಮಗಾರಿಗಳು ಅರ್ಧದಲ್ಲೇ ನಿಂತಿವೆ.

ಇದು ವರ್ಷದ ಮಧ್ಯಂತರ. ಈಗಾಗಲೇ ಎರಡು ತಿಂಗಳು ಕೊರೊನಾ ಪಾಲಾಗಿವೆ. ಮುಂದಿನ ಮೂರ್ನಾಲ್ಕು ತಿಂಗಳು ಮಳೆಯಾಗುವ ಕಾರಣ ಮರಳು ಗಣಿಗಾರಿಕೆಗೆ ಅವಕಾಶ ಇರುವುದಿಲ್ಲ. ಉಳಿದ 3 ತಿಂಗಳು ಜಿಲ್ಲೆಯಲ್ಲಿ ಮರಳಿದ್ದರೂ ಸಾಗಾಟಕ್ಕೆ, ಗಣಿಗಾರಿಕೆಗೆ ಪರವಾನಗಿ ಇರದು. ಒಟ್ಟಾರೆ ‘ಬಂಗಾರದ ಕಡಲೆ’ಯಂತೆ ಮರೀಚಿಕೆ ಆಗಿರುವ ಮರಳು ಜನಸಾಮಾನ್ಯರಿಗೆ ನ್ಯಾಯವಾದ ಬೆಲೆಯಲ್ಲಿ ದೊರಕುವಂತಾಗಲಿ.

ರೂಪೇಶ್ ಜೆ.ಕೆ., ಉಡುಪಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.