ADVERTISEMENT

ಅಂತ್ಯಸಂಸ್ಕಾರ: ವೈಜ್ಞಾನಿಕ ಚಿಂತನೆ ರೂಢಿಸಿಕೊಳ್ಳುವುದೆಂದು?

​ಪ್ರಜಾವಾಣಿ ವಾರ್ತೆ
Published 6 ಜನವರಿ 2023, 19:45 IST
Last Updated 6 ಜನವರಿ 2023, 19:45 IST

ಅಂತ್ಯಸಂಸ್ಕಾರ: ವೈಜ್ಞಾನಿಕ ಚಿಂತನೆ ರೂಢಿಸಿಕೊಳ್ಳುವುದೆಂದು?

‘ದೇಹ ಚಿಗುರಲಿ ಎಲೆ ಎಲೆಯಲ್ಲಿ!’ ಎಂಬ ಸದಾಶಿವ್ ಸೊರಟೂರು ಅವರ ಲೇಖನ (ಸಂಗತ, ಜ. 6) ಅರ್ಥ
ವತ್ತಾಗಿದೆ. ಆದರೆ ‘ನ್ಯಾಚುರಲ್ ಆರ್ಗ್ಯಾನಿಕ್ ರಿಡಕ್ಷನ್’ ಪ್ರಕ್ರಿಯೆಯನ್ನು ಅಮೆರಿಕದ ನ್ಯೂಯಾರ್ಕ್ ಆಡಳಿತವು ಈಚೆಗೆ ಕಾನೂನುಬದ್ಧಗೊಳಿಸಿದಂತೆ ನಮ್ಮ ದೇಶದಲ್ಲಿ ಮಾಡಲಾದೀತೆ? ಮತ್ತು ಅಂತಹ ತಂತ್ರಜ್ಞಾನ ಭಾರತಕ್ಕೆ ಎಂದು ಬಂದೀತೊ ಗೊತ್ತಿಲ್ಲ! ಆದ್ದರಿಂದ ಅಲ್ಲಿಯವರೆಗೆ, ಅಪರಕರ್ಮಗಳಲ್ಲಿ ನಂಬಿಕೆಯಿಲ್ಲದ ವಿಚಾರವಂತರು ತಮ್ಮ ದೇಹವನ್ನು ಸಾವಿನ ನಂತರ ಆಸ್ಪತ್ರೆಗಳಿಗೆ ಒಪ್ಪಿಸಿಬಿಡುವಂತಹ ಮರಣಪತ್ರವನ್ನು (ಉಯಿಲನ್ನು) ಬರೆದು ಆಸ್ಪತ್ರೆಗಳಲ್ಲಿ ನೋಂದಾಯಿಸುವುದು ಸೂಕ್ತ ಎನಿಸುತ್ತದೆ. ಅದರಿಂದ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ದೇಹದ ಅಂಗಾಂಗಗಳ ಅಧ್ಯಯನ ಸುಲಭಸಾಧ್ಯವಾದೀತು.

ಈಗಾಗಲೇ ಕೆಲವರು ಈ ರೀತಿ ಮಾಡಿ ಮರಣಾನಂತರವೂ ತಮ್ಮ ದೇಹವನ್ನು ಸದುಪಯೋಗಗೊಳಿಸಿ
ದ್ದಾರೆ. ಆದರೆ ಅರ್ಥಹೀನ ‘ಸಂಸ್ಕಾರ’ವೆಂಬ ಬಲಿಷ್ಠ ಮೌಢ್ಯದ ಗಾಢಾಲಿಂಗನದಲ್ಲಿ ಸಿಲುಕಿ ನರಳುತ್ತಿರುವ, ವಂಚನೆಗೆ
ಒಳಗಾಗಿರುವ ಮಾನವ ಜನಾಂಗವು ಈ ರೀತಿಯ ವೈಜ್ಞಾನಿಕ ಚಿಂತನೆಯನ್ನು ರೂಢಿಸಿಕೊಳ್ಳುತ್ತದೆಂಬುದು ಗಗನ
ಕುಸುಮವಷ್ಟೆ!

ADVERTISEMENT

-ಪು.ಸೂ.ಲಕ್ಷ್ಮೀನಾರಾಯಣ ರಾವ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.