ADVERTISEMENT

ಮನಃಪರಿವರ್ತನೆಯ ಕಾರ್ಯ ಹೆಚ್ಚಾಗಲಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 19:30 IST
Last Updated 8 ಏಪ್ರಿಲ್ 2021, 19:30 IST

‘ಕಂಬಿಗಳ ಕತ್ತಲ ಹಿಂದೆ ಕವಿಗಳಾದ ಕೈದಿಗಳು’ ವರದಿ (ಪ್ರ.ವಾ., ಏ. 7) ಓದಿ ಸಂತಸವಾಯಿತು. ಅಪರಾಧಿಗಳಲ್ಲಿ ಹೆಚ್ಚಿನವರು ಯೋಜನೆ ರೂಪಿಸಿ ಅಪರಾಧ ಕೃತ್ಯ ಎಸಗಿರುವುದಿಲ್ಲ. ಆಕಸ್ಮಿಕವಾಗಿ ಕೃತ್ಯ ಎಸಗಿರುತ್ತಾರೆ. ಅಂತಹವರು ಪರಿವರ್ತನೆಯಾಗಿ ಸಮಾಜದ ಮುಖ್ಯವಾಹಿನಿ ಸೇರಬೇಕು.

ರೆಕ್ಕೆ ಮುರಿದ ಹಕ್ಕಿಗಳ ನೋವನ್ನು ಅಕ್ಷರ ರೂಪದ ಮುಖಾಂತರ ‘ಬಂಧನದ ಭಾವಲಹರಿ’ ಕೃತಿ ಪ್ರಕಟಣೆ ಮೂಲಕ ಹೊರಹಾಕಿಸಿ, ಅವರನ್ನು ಸೃಜನಶೀಲರನ್ನಾಗಿ ಮಾಡುವಲ್ಲಿ ಡಾ. ಕೆ.ರಂಗನಾಥ್ ಯಶಸ್ವಿಯಾಗಿದ್ದಾರೆ. ವ್ಯಕ್ತಿ ಸುಸಂಸ್ಕೃತನಾಗಲು ಬಯಸಿದರೆ, ಅವನ ಸುತ್ತಮುತ್ತಲಿನ ವಾತಾವರಣವೂ ಬದಲಾಗುತ್ತದೆ. ಅಪರಾಧಿಯ ಮನದಲ್ಲಿ ಮಾನವೀಯ ಮೌಲ್ಯಗಳು ಪಸರಿಸಿದರೆ ಸಮಾಜದಲ್ಲಿ ಆರೋಗ್ಯಕರ ವಾತಾವರಣ ಸೃಷ್ಟಿಯಾಗಲು ಸಾಧ್ಯ.

–ಮಹಾದೇವ ಎಸ್. ಪಾಟೀಲ, ರಾಯಚೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.