ADVERTISEMENT

ಯೋಜನೆಯಿಂದ ಹಿಂದೆ ಸರಿಯದಿರಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 7 ಜುಲೈ 2022, 19:12 IST
Last Updated 7 ಜುಲೈ 2022, 19:12 IST

ನಮ್ಮ ಹಳ್ಳಿಗಳಲ್ಲಿ ಎಷ್ಟೋ ಮಕ್ಕಳು ಚಪ್ಪಲಿಯೂ ಇಲ್ಲದೆ ಬರಿಗಾಲಿನಲ್ಲಿ ಶಾಲೆಗೆ ನಡೆದುಕೊಂಡು ಹೋಗುವ ದೃಶ್ಯ ಶಿಕ್ಷಣ ಸಚಿವರ ಗಮನಕ್ಕೆ ಬಂದಿದ್ದರೆ, ‘ಮಕ್ಕಳು ಶಾಲೆಗೆ ಬರುವುದು ಕಲಿಯುವುದಕ್ಕೆ ವಿನಾ ಶೂ, ಸಾಕ್ಸ್‌ ಹಾಕಿಕೊಳ್ಳಲು ಅಲ್ಲ’ ಎಂಬ ಹೇಳಿಕೆಯನ್ನು (ಪ್ರ.ವಾ., ಜುಲೈ 7) ಖಂಡಿತವಾಗಿಯೂ ಅವರು ನೀಡುತ್ತಿರಲಿಲ್ಲ.

ಪಾಲಕರು ತಮ್ಮ ಮಕ್ಕಳಿಗೆ ಶೂ ಖರೀದಿಸುವಷ್ಟೂ ಸಾಮರ್ಥ್ಯ ಹೊಂದಿಲ್ಲವೇ ಎನ್ನುವುದು ಮೂರ್ಖತನದ ಪ್ರಶ್ನೆ ಎನಿಸುತ್ತದೆ. ಗ್ರಾಮೀಣ ಪ್ರದೇಶದ ಎಷ್ಟೋ ಮಕ್ಕಳು ಚಪ್ಪಲಿ, ಶೂ ಹಾಕಿಕೊಳ್ಳದೆ ಶಾಲೆಗಳಿಗೆ ಹೋಗುವುದನ್ನು ಈಗಲೂ ಕಾಣಬಹುದು.ಮಗುವಿನ ಪಾದಗಳನ್ನು ಸೋಂಕು ಮತ್ತು ಗಾಯಗಳಿಂದ ಶೂ ರಕ್ಷಿಸುತ್ತದೆ. ಪೂರ್ಣ ಪ್ರಮಾಣದಲ್ಲಿ ಸಮವಸ್ತ್ರ ಧರಿಸಿ ಶಾಲೆಗೆ ಹೋಗುವ ಮಗುವನ್ನು ನೋಡುವುದೇ ಆನಂದ! ಶೂ, ಸಾಕ್ಸ್‌ ವಿತರಣೆಯಲ್ಲಿ ವಿಳಂಬವಾದರೂ ಸರಿ, ಅವನ್ನು ಕೊಡುವುದರಿಂದ ಹಿಂದೆ ಸರಿಯುವ ನಿರ್ಧಾರವನ್ನಂತೂ ಸರ್ಕಾರ ಮಾಡದಿರಲಿ.

⇒ಪ್ರವೀಣ ನಾಗಪ್ಪ ಯಲವಿಗಿ,ಹಾವೇರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.