ADVERTISEMENT

ಮೂಕಪ್ರೇಕ್ಷಕ ಮನೋಭಾವ ತರವಲ್ಲ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 19:29 IST
Last Updated 2 ಡಿಸೆಂಬರ್ 2020, 19:29 IST

ಯುವಕರು ಜನಜಾಗೃತಿಯ ಮೂಲಕ ಸಾಮಾಜಿಕ ಕ್ರಾಂತಿ ಸಾಧಿಸಬಹುದು, ಹೊಸ ಮೌಲ್ಯಗಳಿರುವ ನವಸಮಾಜವನ್ನು ಸೃಷ್ಟಿ ಮಾಡಬಹುದು. ಆದರೆ ನಮ್ಮ ಸಮಾಜ ನಿಂತ ನೀರಿನಂತೆ ಆಗಿದೆ, ಅನೇಕ ಸಾಮಾಜಿಕ ಕಾಯಿಲೆಗಳ ಆವಾಸಸ್ಥಾನವಾಗಿದೆ. ಸ್ವಾತಂತ್ರ್ಯ ಬಂದು 73 ವರ್ಷಗಳೇ ಗತಿಸಿದರೂ ಬಡವರು ಬಡವರಾಗಿಯೇ ಉಳಿದಿದ್ದಾರೆ. ಕೆಲವೇ ಮಂದಿ ಸಹಸ್ರಾರು ಕೋಟಿ ರೂಪಾಯಿಗಳ ಒಡೆಯರಾಗಿದ್ದಾರೆ. ಪಕ್ಷ ರಾಜಕೀಯವಂತೂ ಹೊಲಸಾಗಿದೆ. ವಿದ್ಯೆ ಮಾರಾಟದ ವಸ್ತುವಾಗಿದೆ. ಇದನ್ನೆಲ್ಲ ನಮ್ಮ ಯುವಕರು ಮೂಕಪ್ರೇಕ್ಷಕರಂತೆ ನೋಡಿಕೊಂಡು ಕುಳಿತಿದ್ದಾರೆ. ಇಂಥ ಮನೋಭಾವ ಯುವಕರಿಗೆ ತರವಲ್ಲ. ‌

ಗಾಢನಿದ್ರೆಯಲ್ಲಿರುವ ಯುವಕರು ಮೈಕೊಡವಿಕೊಂಡು ಏಳಬೇಕು. ಮೊದಲು ದೇಶದ ಇಂದಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಸಮಸ್ಯೆಗೆ ಪರಿಹಾರ ಕಂಡುಕೊಂಡು ಬದಲಾವಣೆಗೆ ಸಂಘಟಿತರಾಗಿ ಹೋರಾಡಬೇಕು. ಆಗ ದೇಶದ ಚಿತ್ರಣವೇ ಬದಲಾಗಬಲ್ಲದು.

ದೇವೇಂದ್ರಗೌಡ ಜಿರ್ಲಿ, ಉಚ್ಚಲಕುಂಟಾ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.