ADVERTISEMENT

ಆಚಾರ ವಿಚಾರಕ್ಕೆ ಮರುಹುಟ್ಟು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 7 ಅಕ್ಟೋಬರ್ 2020, 19:30 IST
Last Updated 7 ಅಕ್ಟೋಬರ್ 2020, 19:30 IST

ಕೊರೊನಾ ವೈರಸ್‌, ಸರಳ ಮದುವೆಗೆ ಕಾರಣವಾಗಿರುವುದರ ಕುರಿತು ಸಿಬಂತಿ ಪದ್ಮನಾಭ ಅವರು ಬರೆದಿರುವುದು ಸೂಕ್ತವಾಗಿದೆ (ಸಂಗತ, ಅ. 7). ಈ ಬೆಳವಣಿಗೆಯಿಂದ ಕೆಲವರಿಗೆ ಅನುಕೂಲವಾಗಿದ್ದರೆ ಇನ್ನು ಕೆಲವರಿಗೆ ಸಮಸ್ಯೆಯಾಗಿದೆ. ಯಾವುದೇ ಚೌಲ್ಟ್ರಿಯಲ್ಲಿ ವಿಜೃಂಭಣೆಯಿಂದ ವಿವಾಹ ಮಾಡಲು ಅವಕಾಶವಿಲ್ಲದಿರುವುದು ಸರಿ. ಆದರೆ ಇದರಿಂದ ನಮ್ಮ ಪುರಾತನ ಸಂಸ್ಕೃತಿ ಮತ್ತು ಸಂಪ್ರದಾಯಗಳು ಬೆಳಕಿನತ್ತ ಸಾಗುವ ದಿನಗಳು ಬಂದಿವೆ. ನಮ್ಮ ಆಚಾರ ವಿಚಾರಗಳು ಸಹ ಮರುಹುಟ್ಟು ಪಡೆದಿವೆ. ಜೊತೆಗೆ ಹಣದ ಅಪವ್ಯಯವೂ ತಪ್ಪುತ್ತಿದೆ. ತಮ್ಮ ತಮ್ಮ ಹಳ್ಳಿಗಳಲ್ಲಿ ವಿವಾಹವಾಗುವುದು ಸೌಹಾರ್ದದ ಸಂಕೇತವಾಗಿದೆ. ಈ ಎಲ್ಲ ಕಾರಣಗಳಿಂದ, ಮದುವೆ ವಿಚಾರದಲ್ಲಿ ಇದೊಂದು ಆಶಾದಾಯಕ ಬೆಳವಣಿಗೆಯೇ ಸರಿ.

- ಸಂತೋಷ್ ಎಚ್‌.ಡಿ.,ಹನುಮಂತಯ್ಯನಪಾಳ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT