ADVERTISEMENT

ಬುದ್ಧಿವಂತರೇ ಕೈ ಚಾಚಿದರೆ...

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 19:45 IST
Last Updated 5 ಡಿಸೆಂಬರ್ 2021, 19:45 IST

ಮೈಸೂರಿನ ಪತ್ರಕರ್ತರು ಏರ್ಪಡಿಸಿದ್ದ ಸಂವಾದದಲ್ಲಿ ‘ವಿಧಾನಪರಿಷತ್‌ ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚುವುದಿಲ್ಲ ಎಂದು ದೇವರ ಹೆಸರಿನಲ್ಲಿ ಪ್ರಮಾಣ ಮಾಡುವಿರಾ?’ ಎಂಬ ಮಾಧ್ಯಮದವರ ಪ್ರಶ್ನೆಗೆ, ವಾಟಾಳ್ ನಾಗರಾಜ್ ಹೊರತುಪಡಿಸಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳ ಅಭ್ಯರ್ಥಿಗಳು ಸರಿಯಾಗಿ ಉತ್ತರಿಸಲು ಹಿಂದೇಟು ಹಾಕಿದ್ದಾರೆ. ಅಂದರೆ ಮತದಾರರಿಗೆ ಹಣ ಹಂಚುತ್ತೇವೆ ಎಂದು ಪರೋಕ್ಷವಾಗಿ ಇವರೆಲ್ಲ ಒಪ್ಪಿಕೊಂಡಂತಾಗಿದೆ. ಮತದಾರರಿಗೆ ಹಣ ಹಂಚದೆ ಯಾವ ಚುನಾವಣೆಯೂ ನಡೆಯುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ನಗ್ನಸತ್ಯ. ಹಣ ನೀಡಿ ಮತ ಪಡೆಯುವುದನ್ನು ತಡೆಗಟ್ಟುವುದು ಅಸಾಧ್ಯದ ಮಾತು. ತನ್ನ ಮತ ಎಷ್ಟು ಅಮೂಲ್ಯ ಎಂದು ಜನರಿಗೆ ಹೇಳಬೇಕಾದ ಬುದ್ಧಿವಂತರೇ ಹಣಕ್ಕೆ ಕೈ ಚಾಚಿ ಮುಗಿಬೀಳುತ್ತಿದ್ದಾರೆ. ಹಿಂದೆ ಶಿಕ್ಷಕರ ಕ್ಷೇತ್ರಗಳಲ್ಲಿ ನಡೆದ ಚುನಾವಣೆಗಳಲ್ಲಿ ಬಹುತೇಕ ಶಿಕ್ಷಕ ಮತದಾರರು ಹಣ ಮತ್ತು ಉಡುಗೊರೆ ಪಡೆದು ಮತ ಹಾಕಿದ್ದ ಬಗ್ಗೆ ಗುಸುಗುಸು ಇದೆ. ಬೇಲಿಯೇ ಎದ್ದು ಹೊಲ ಮೇಯ್ದರೆ ದಾರಿ ತೋರುವವರು ಯಾರು?!

-ವಿ.ತಿಪ್ಪೇಸ್ವಾಮಿ,ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT