ADVERTISEMENT

ಕ್ರೀಡಾ ಕೌಶಲಕ್ಕೆ ಆದ್ಯತೆ ಸಿಗಲಿ

ಮಹಾಂತೇಶ ಗ.ಓಶಿಮಠ. ಕಾರವಾರ
Published 2 ಡಿಸೆಂಬರ್ 2019, 17:18 IST
Last Updated 2 ಡಿಸೆಂಬರ್ 2019, 17:18 IST

2030ರ ಒಳಗಾಗಿ ರಾಜ್ಯದ ಎರಡು ಕೋಟಿಗೂ ಅಧಿಕ ಯುವಸಮೂಹಕ್ಕೆ ಕೌಶಲ ತರಬೇತಿ ನೀಡುವ ಗುರಿಯನ್ನು ಸರ್ಕಾರ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಕ್ರೀಡಾ ಕ್ಷೇತ್ರದಲ್ಲೂ ಯುವಜನರಿಗೆ ಉದ್ಯೋಗದ ಅವಕಾಶ ಇರುವುದರಿಂದ, ಈ ವಿಷಯ
ದಲ್ಲೂ ಕೌಶಲ ತರಬೇತಿಗಳನ್ನು ಹಮ್ಮಿಕೊಳ್ಳಬೇಕು.

ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ವೃತ್ತಿಪರ ಕ್ರೀಡೆಗಳನ್ನು ಆಡುವ ಪರಿಪಾಟ ಹೆಚ್ಚುತ್ತಿದೆ. ಅಂಪೈರಿಂಗ್, ತರಬೇತುದಾರ, ಕ್ರೀಡಾ ಸಂಯೋಜನೆ, ಸ್ಟೇಡಿಯಂಗಳ ನಿರ್ವಹಣೆ, ಕ್ರೀಡಾ ಪರಿಕರಗಳ ತಯಾರಿಕೆ ಅಲ್ಲದೆ ಇನ್ನಿತರ ಕ್ರೀಡಾ ಸಂಬಂಧಿ ಕೆಲಸಗಳಿಗೆ ವಿಶ್ವದಾದ್ಯಂತ ಬೇಡಿಕೆ ಇದೆ. ಸರ್ಕಾರವು ಕ್ರೀಡಾ ಕೌಶಲ ತರಬೇತಿಗಳನ್ನು ನಡೆಸುವುದರಿಂದ ನಿರುದ್ಯೋಗಿ ದೈಹಿಕ ಶಿಕ್ಷಣ ಶಿಕ್ಷಕರು ಮಾತ್ರವಲ್ಲದೆ ಇತರ ಕ್ರೀಡಾಸಕ್ತರೂ ತಮ್ಮ ಕೌಶಲಗಳನ್ನು ಹೆಚ್ಚಿಸಿಕೊಂಡು, ರಾಜ್ಯದ ಕ್ರೀಡಾರಂಗದ ಬೆಳವಣಿಗೆಗೆ ತಮ್ಮ ಕೊಡುಗೆ ನೀಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT