ADVERTISEMENT

ವಾಚಕರ ವಾಣಿ | ನೋಟ್‌ಬುಕ್‌ ಟ್ಯಾಬ್ಲೆಟ್‌– ಶಾಲಾ ಮಕ್ಕಳನ್ನೂ ಪರಿಗಣಿಸಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 23 ಜೂನ್ 2021, 19:45 IST
Last Updated 23 ಜೂನ್ 2021, 19:45 IST

ಕೊರೊನಾ ಸೋಂಕಿನ ಆತಂಕ ಸದ್ಯಕ್ಕೆ ಒಂದು ಹಂತಕ್ಕೆ ಬಂದು ನಿಂತಿದ್ದರೂ ಮೂರನೆಯ ಅಲೆಯ ಗುಮ್ಮದ ಭಯ ಇದ್ದೇ ಇದೆ. ಇಂತಹ ಸ್ಥಿತಿಯಲ್ಲಿ ಶೈಕ್ಷಣಿಕ ವ್ಯವಸ್ಥೆ ಅಷ್ಟು ಸುಲಭದಲ್ಲಿ ಹಳಿಗೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಿರುವಾಗ ಸರ್ಕಾರವು ಪದವಿ ವಿದ್ಯಾರ್ಥಿಗಳಿಗೆ ಕಲಿಕಾ ಟ್ಯಾಬ್ಲೆಟ್ ಪಿ.ಸಿ.ಗಳನ್ನು ಕೊಡಲು ಉದ್ದೇಶಿಸಿರುವುದು ಅತ್ಯಂತ ಸೂಕ್ತವಾದ ನಿರ್ಧಾರವಾಗಿದೆ.

ಇದೇ ರೀತಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೂ ನೋಟ್‌ಬುಕ್‌ ಟ್ಯಾಬ್ಲೆಟ್‌ ನೀಡುವುದು ಉಚಿತ. ಇದ ರಿಂದ ಮಕ್ಕಳು ಮನೆಯಲ್ಲೇ ಶಾಲಾ ಶಿಕ್ಷಕರ ಮೂಲಕ ಕಲಿಕೆಯಲ್ಲಿ ನಿರತರಾಗುವುದು ಸುಲಭವಾಗುತ್ತದೆ. ಜೊತೆಗೆ ಪಠ್ಯಪುಸ್ತಕದ ಅಗತ್ಯವೂ ಅಷ್ಟಾಗಿ ಬರದು. ಮುಂದೆ ಶಾಲೆಗಳು ಆರಂಭವಾದಾಗಲೂ ಮಕ್ಕಳು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.

-ತಿರುಪತಿ ನಾಯಕ್,ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT