ADVERTISEMENT

ವಿದ್ಯಾರ್ಥಿಗಳನ್ನು ಕರೆದೊಯ್ಯುವ ಹಾದಿ ಸುಗಮಗೊಳಿಸಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 19:50 IST
Last Updated 25 ಜುಲೈ 2019, 19:50 IST

ಹುಣಸೂರು ತಾಲ್ಲೂಕಿನ ಚಿಲ್ಕುಂದ ಗ್ರಾಮದ ವಿದ್ಯಾರ್ಥಿಗಳನ್ನುಕ್ರೀಡಾಕೂಟದಲ್ಲಿ ಭಾಗವಹಿಸಲು ಯಮಗುಂಬ ಎಂಬ ಗ್ರಾಮಕ್ಕೆ ಗೂಡ್ಸ್ ವಾಹನದಲ್ಲಿ ಕರೆದೊಯ್ದಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಆ ಶಾಲೆಯ ಶಿಕ್ಷಕರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ (ಪ್ರ.ವಾ., ಜುಲೈ 25). ನಿಜ, ಪುಟ್ಟ ಮಕ್ಕಳನ್ನು ಹೀಗೆ ಅಸುರಕ್ಷಿತವಾಗಿ ಸಿಕ್ಕ ಸಿಕ್ಕ ವಾಹನಗಳಲ್ಲಿ ಕರೆದೊಯ್ಯಬಾರದು. ಆದರೆ ಕ್ರೀಡಾಕೂಟ ಅಥವಾ ಸಮಾರಂಭಗಳಿಗೆ ಶಾಲೆಗಳು ಮಾತ್ರವೇ ಮಕ್ಕಳನ್ನು ಕರೆದೊಯ್ಯಬೇಕೆಂದು ಇಲಾಖೆಯ ಸ್ಪಷ್ಟ ನಿರ್ದೇಶನವಿದೆ.

ಇಂತಹ ದಿನ ಮಕ್ಕಳನ್ನು ಕರೆದೊಯ್ಯಬೇಕೆಂದು ಶಾಲಾ ಆಡಳಿತ ಮಂಡಳಿಯು ಮೊದಲೇ ಕೋರಿದ್ದರೂ ಸಕಾಲದಲ್ಲಿ ಅನುಮತಿ ದೊರೆಯುವುದೇ? ನೂರಾರು ಕೊಕ್ಕೆಗಳು, ನೂರು ಪ್ರಶ್ನೆಗಳು, ಸ್ಪರ್ಧಾತ್ಮಕ ದರ ಪಟ್ಟಿಯ ತುಲನೆ... ಹೀಗೆ ವಿವಿಧ ಸಬೂಬುಗಳ ನಡುವೆ ಪತ್ರ ವ್ಯವಹಾರ ಮತ್ತು ಅಲೆಯುವುದರಲ್ಲಿಯೇ ಸಮಯ ಕಳೆದು ಹೋಗುತ್ತದೆ. ಸಕಾರಣಕ್ಕೆ ಹೊರಗೆ ಹೋಗಬೇಕಾದ ವಿದ್ಯಾರ್ಥಿಗಳಿಗೆ ಸಮೂಹ ಸಾರಿಗೆ ವ್ಯವಸ್ಥೆ ಕಲ್ಪಿಸುವತ್ತ ಇಲಾಖೆ ಇನ್ನಾದರೂ ಚಿಂತಿಸಬೇಕು.⇒ವಿಜಯ್ ಹೆಮ್ಮಿಗೆ, ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.