ADVERTISEMENT

ದಿಢೀರನೆ ಹುಟ್ಟಿಕೊಳ್ಳುವ ಮೌಢ್ಯಗಳು!

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 20:00 IST
Last Updated 15 ನವೆಂಬರ್ 2018, 20:00 IST

ಹಿಂದೂಗಳಲ್ಲಿ ಕೆಲವರು ಮೃತ ಹಿರಿಯರ ಫೋಟೊಗಳನ್ನು ದೇವರ ಕೋಣೆಯಲ್ಲಿಡುತ್ತಾರೆ. ಹಾಗೆ ಇಡಬಾರದಂತೆ! ಯಾವುದೇ ಮೃತ ವ್ಯಕ್ತಿಯ ಫೋಟೊವನ್ನು ದೇವರ ಕೋಣೆಯಲ್ಲಿಡುವುದು ಅಶುಭವೆಂದು ವಾಸ್ತುಶಾಸ್ತ್ರವು ಹೇಳುತ್ತದಂತೆ!

ದಿಢೀರನೆ ಹುಟ್ಟಿಕೊಳ್ಳುವ ಇಂತಹ ಮೌಢ್ಯಗಳನ್ನು ವಿವೇಚನಾರಹಿತವಾಗಿ ನಂಬುವವರು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೆ ಇವರನ್ನು ನಂಬಿಸಿ ಬಲಿಹಾಕುವವರು ವರ್ಧಿಸುತ್ತಲೇ ಹೋಗುತ್ತಾರೆ. ಸಮಗ್ರವಾದ ಮತ್ತು ಕಟ್ಟುನಿಟ್ಟಾದ ‘ಮೌಢ್ಯ ನಿಷೇಧ ಕಾನೂನು’ ಅನುಷ್ಠಾನಕ್ಕೆ ಬರುವುದೇ ಇಂತಹ ಸಾಮಾಜಿಕ ಪಿಡುಗಿನ ನಿವಾರಣೆಗೆ ಇರುವ ಏಕೈಕ ಮಾರ್ಗ. ಆದರೆ, ಸ್ವಯಂ ಹಲವು ಮೌಢ್ಯಗಳಿಗೆ ತುತ್ತಾಗಿರುವ ಕುಟುಂಬದ ಸರ್ಕಾರದಿಂದ ಇಂತಹುದೊಂದು ಕಾನೂನನ್ನು ನಿರೀಕ್ಷಿಸಲು ಸಾಧ್ಯವೆ?

–ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.