ADVERTISEMENT

ಪರಿಗಣನೆಗೆ ಅರ್ಹವಾದ ಸಲಹೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 13 ಸೆಪ್ಟೆಂಬರ್ 2022, 19:30 IST
Last Updated 13 ಸೆಪ್ಟೆಂಬರ್ 2022, 19:30 IST

‘ಸ್ವಾಮೀಜಿಗಳು ಮದುವೆ ಆಗಿಯೇ ಮಠ ನಡೆಸಲಿ’ ಎಂದು ಅಭಿಪ್ರಾಯಪಟ್ಟಿದ್ದಾರೆ ಚಿತ್ತಾಪುರ ತಾಲ್ಲೂಕಿನ ಕರದಾಳ್‌ ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ (ಪ್ರ.ವಾ., ಸೆ. 12). ನಿಜ, ಸ್ವಾಮೀಜಿಯ ಅಭಿಪ್ರಾಯವು ಉಳಿದ ಮಠದ ಸ್ವಾಮಿಗಳು ಹಾಗೂ ಅವರ ಭಕ್ತಜನ ಗಂಭೀರವಾಗಿ ಪರಿಗಣಿಸಲು ಅರ್ಹವಾಗಿದೆ. ರಾಮಕೃಷ್ಣ ಪರಮಹಂಸ ಮತ್ತು ಶಾರದಾಮಣಿ ದೇವಿಯವರ ‘ಆತ್ಮಸಂಗಾತ’ದಂತಹ ದಾಂಪತ್ಯ ಇರಲಿಲ್ಲವೆ? ಸಂಸಾರ ಜೀವನದ ಬಗ್ಗೆ ಕವಿ ಕುವೆಂಪು ವಾಣಿ ಅಭಯಪ್ರದಾನವಾಗಿದೆ: ‘ಜೀವ ರಥೋತ್ಸವವಿದನಣಕಿಸದಿರು, ಎಲೆ ಸಂನ್ಯಾಸಿ!
ಸಾರಥಿಯನು ನೋಡಾದರು ಬಾ, ತೇರನು ಎಳೆಯುವ ಸಂನ್ಯಾಸಿ!’

ಇಲ್ಲಿ ಹೆದರುವ ಅಗತ್ಯವಿಲ್ಲ, ಸಾರಥಿ ಬಲ್ಲನು ಸತ್ಪಥವ. ಆದ್ದರಿಂದ ಯಾವ ಮುಜುಗರವೂ ಇಲ್ಲದೆ ಮಠದ ಸ್ವಾಮಿಗಳು ಮದುವೆ ಆಗಲೂಬಹುದು. ತಪ್ಪೇನಿಲ್ಲ. ಇದು ಕಲಿಯುಗವೆಂದು ಭಕ್ತಾದಿಗಳು ನಡೆದುಕೊಳ್ಳಲೂ
ಬಹುದು. ಅರ್ಜುನಸನ್ಯಾಸಿಯಂತೆ ಇರುವುದಕ್ಕಿಂತ ಸಾರ್ವಜನಿಕವಾಗಿ ಮಾನ ಮರ್ಯಾದೆಯಿಂದ ‘ಜೀವ ರಥೋತ್ಸವ’ ಎಂದು ನಾವು ಬದುಕು ನಡೆಸುವುದು ಮುಖ್ಯ.

- ಪ್ರೊ. ಶಿವರಾಮಯ್ಯ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.