ADVERTISEMENT

ಶಿಕ್ಷಕರಲ್ಲಿ ತಾರತಮ್ಯ ಬೇಡ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 18:18 IST
Last Updated 27 ಜೂನ್ 2019, 18:18 IST

ಸಾರ್ವಜನಿಕ ಶಿಕ್ಷಣ ಇಲಾಖೆಯು 2014 ಮತ್ತು ನಂತರದ ನೇಮಕಾತಿಗಳಲ್ಲಿ 6ರಿಂದ 8ನೇ ತರಗತಿಗಳಿಗೆ ನೇಮಕಗೊಂಡ ಪದವೀಧರ ಪ್ರಾಥಮಿಕ ಶಿಕ್ಷಕರನ್ನು ಹೊರತುಪಡಿಸಿ, ಉಳಿದ ಎಲ್ಲ ಶಿಕ್ಷಕರನ್ನು ಪ್ರಾಥಮಿಕ ಶಾಲಾ ಶಿಕ್ಷಕರು (1ರಿಂದ 5ನೇ ತರಗತಿ) ಎಂದು ಟಿ.ಡಿ.ಎಸ್.ನಲ್ಲಿ ನಮೂದಿಸಬೇಕೆಂದು ಆದೇಶಿಸಿದೆ.

ಆದರೆ ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆ ಸೃಷ್ಟಿಯಾಗುವುದಕ್ಕಿಂತ ಮೊದಲಿನಿಂದಲೂ ಹಾಗೂ ಪ್ರಸ್ತುತ ಈ ಶಿಕ್ಷಕರು 1ರಿಂದ 8ನೇ ತರಗತಿವರೆಗೆ ಬೋಧಿಸುತ್ತಿದ್ದಾರೆ. ಬೆರಳಣಿಕೆಯಷ್ಟು, ಅಂದರೆ ಕ್ಲಸ್ಟರ್‌ಗೆ ಒಬ್ಬರಂತೆ ಪದವೀಧರ ಪ್ರಾಥಮಿಕ ಶಿಕ್ಷಕ ರಿದ್ದು, ಒಂದೇ ವಿಷಯವನ್ನು ಬೋಧಿಸುತ್ತಿದ್ದಾರೆ.

ಹಾಗಾದರೆ 1ರಿಂದ 5ನೇ ತರಗತಿಗೆ ಬೋಧಿಸಲು ನೇಮಕವಾದ, ಅರ್ಹತೆ ಇಲ್ಲದ ನಮ್ಮಿಂದ ಅದಕ್ಕಿಂತ ಮೇಲಿನ ತರಗತಿಗಳಿಗೆ ಬೋಧನೆ ಮಾಡಿಸುವುದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತೆ ಆಗುವುದಿಲ್ಲವೇ? ನಮ್ಮಿಂದ ಮೇಲಿನ ತರಗತಿಗಳಿಗೆ ಬೋಧನೆ ಮಾತ್ರ ಬೇಕು, ಪದನಾಮ ಹಾಗೂ ವೇತನದಲ್ಲಿ ಮಾತ್ರ ತಾರತಮ್ಯವೇಕೆ?

ADVERTISEMENT

ಮಂಜುನಾಥ ಗಂಟೇರ,ಉಪ್ಪುಣಸಿ, ಹಾನಗಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.