ಲಾಕ್‌ಡೌನ್ ಕಾರಣದಿಂದ ಶ್ರಮಿಕ ವರ್ಗಕ್ಕೆ ಸರ್ಕಾರ ಇತ್ತೀಚೆಗೆ ಘೋಷಿಸಿರುವ ವಿಶೇಷ ಪ್ಯಾಕೇಜ್‌ನ ಹಣ ಇನ್ನು ಕೆಲವೇ ದಿನಗಳಲ್ಲಿ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗುವ ಸಾಧ್ಯತೆ ಇದೆ. ಈ ಹಣವನ್ನು ಪಡೆದುಕೊಳ್ಳಲು ಫಲಾನುಭವಿಗಳು ಒಂದೇ ಸಮಯದಲ್ಲಿ ಬ್ಯಾಂಕಿಗೆ ತೆರಳುವ ಸಾಧ್ಯತೆ ಹೆಚ್ಚಾಗಿ ಇರುವುದರಿಂದ, ಜನಸಂದಣಿ ಉಂಟಾಗಿ ಮಾರಕ ಕೋವಿಡ್-19 ಉಲ್ಬಣಗೊಳ್ಳಬಹುದು. ಹೀಗಾಗಿ, ಬ್ಯಾಂಕುಗಳಲ್ಲಿ ತಾತ್ಕಾಲಿಕವಾಗಿ ಹೆಚ್ಚುವರಿ ಕೌಂಟರ್‌ಗಳನ್ನು ತೆರೆದು ಫಲಾನುಭವಿಗಳಿಗೆ ನಗದನ್ನು ವಿತರಿಸಬೇಕು. ಆಗ ಕೋವಿಡ್ ನಿಯಮಾವಳಿಗಳನ್ನು ಪಾಲಿಸುವುದರ ಜೊತೆಗೆ ಫಲಾನುಭವಿಗಳಿಗೆ ಶೀಘ್ರದಲ್ಲಿ ನಗದನ್ನು ವಿತರಿಸಿದಂತೆಯೂ ಆಗುತ್ತದೆ.
– ಸುನೀಲ್ ಕುಮಾರ್ ಬಿ.ಎಸ್.,ಬನ್ನೂರು, ಟಿ.ನರಸೀಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.