ADVERTISEMENT

ವಾಚಕರ ವಾಣಿ: ಬಟ್ಟೆ ಹಾವೂ ಕಚ್ಚುವಂತಾಯಿತು!

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 19:33 IST
Last Updated 22 ಫೆಬ್ರುವರಿ 2021, 19:33 IST

ಹದಿನೈದು ವರ್ಷಗಳ ಹಿಂದಿನ ಮೈತ್ರಿ ಸರ್ಕಾರದಲ್ಲಿ ಹಾಲಿ ಮುಖ್ಯಮಂತ್ರಿ ಸೇರಿದಂತೆ ಅನೇಕ ಮುಖಂಡರು, ಮಠಾಧೀಶರನ್ನು ಬೀದಿಗೆ ಕರೆತಂದು ಪ್ರತಿಭಟನೆ ಮಾಡಿಸಿದ್ದರು. ಆಗಿನ ಅಧಿಕಾರದ ಏಣಿಗೆ ಕಾವಿಯನ್ನು
ಸಂದರ್ಭೋಚಿತವಾಗಿ ಬಳಸಿಕೊಂಡವರು, ತಮ್ಮ ಬೆನ್ನಿಗೆ ನಿಂತವರನ್ನು ಸಂತೈಸಲು ಭರಪೂರ ದೇಣಿಗೆ ನೀಡಿದ್ದು ಸಾರ್ವಜನಿಕ ಸತ್ಯ. ಅಂದಿನಿಂದ ಬಟ್ಟೆ ಹಾವನ್ನು ತೋರಿಸಿ ಒತ್ತಾಯಿಸುವ ಆಟವನ್ನು ಮಂತ್ರಿಮಹೋದಯರು
ಅನುಕರಿಸಿದ್ದರು. ಆದರೆ ಅದೇ ಹಾವು ಮುಂದೊಮ್ಮೆ ಕಚ್ಚುವಂತಹ ಹಲ್ಲುಗಳನ್ನು ಬೆಳೆಸಿಕೊಳ್ಳುತ್ತದೆ ಎಂದು ನಂಬಿರಲಿಲ್ಲ.

ಅಧಿಕಾರದ ಆಸುಪಾಸಿನಲ್ಲೇ ಇರುವ ಮುಖಂಡರು ತಮ್ಮ ಸರ್ಕಾರದ ವಿರುದ್ಧವೇ ಪ್ರತಿಭಟಿಸುತ್ತಿದ್ದಾರೆ. ಮುಂದುವರಿದ ಹಾವಿನಾಟ, ಅಧಿಕಾರಕ್ಕಾಗಿನ ಹಾವು-ಏಣಿ ಆಟವಾಗಿರುವುದು ಸ್ಪಷ್ಟ. ಇನ್ನಾದರೂ ರಾಜಕೀಯ ನಾಯಕರು ಧರ್ಮ, ಜಾತೀಯತೆಯಿಂದ ಕೊಂಚ ದೂರ ಉಳಿದರೆ ಅವರಿಗೇ ಒಳ್ಳೇಯದಲ್ಲವೆ? ರಾಜಕೀಯವು ಮಠದ ಹೊರಗಿದ್ದರೆ ಒಳ್ಳೆಯದು. ಎರಡೂ ಅದಲು ಬದಲಾದರೆ ನಂತರದ ಪೀಕಲಾಟದಲ್ಲಿ ಸೂತ್ರಧಾರರೇ
ಪಾತ್ರಧಾರಿಗಳಾಗಿ ಬಿಡುತ್ತಾರೆ.

ಶಾಂತರಾಜು ಎಸ್. ಮಳವಳ್ಳಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.