ADVERTISEMENT

ರಾಜಕಾರಣಿಗಳ ಹೆಸರಿಡುವ ಸಂಪ್ರದಾಯ ಸಲ್ಲ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 19:30 IST
Last Updated 11 ಆಗಸ್ಟ್ 2021, 19:30 IST

ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಅಥವಾ ಸ್ವಾತಂತ್ರ್ಯಪೂರ್ವದಲ್ಲೇ ಇಟ್ಟಿರುವ ಹೆಸರುಗಳನ್ನು ಇತ್ತೀಚಿನ ದಿನಗಳಲ್ಲಿ ಬದಲಾಯಿಸುವ ಕೇಡಿನ ಪರಂಪರೆ ಸೃಷ್ಟಿಯಾಗಿದೆ. ಸಾಮಾನ್ಯವಾಗಿ ಹೆಸರುಗಳನ್ನು ಅವರ ಸಾಧನೆ, ಅವರವರ ಕೊಡುಗೆ, ಜನರು ಅವರನ್ನು ಪ್ರೀತಿಸುವುದರ ಮೇಲೆ ನಿರ್ಣಯಿಸಿ, ಕೆಲವೊಮ್ಮೆ ಅತೀ ಅಭಿಮಾನದಿಂದ ಇಡಲಾಗುತ್ತದೆ. ಏನೇ ಆದರೂ ಇಟ್ಟ ಹೆಸರುಗಳು ಅವರ ಅಲ್ಪಸ್ವಲ್ಪ ಕೊಡುಗೆಯನ್ನಾದರೂ ನೆನಪಿಸುತ್ತವೆ. ಹೀಗಿರು ವಾಗ ದ್ವೇಷದಿಂದ, ರಾಜಕೀಯ ಕಾರಣದಿಂದ, ಜಾತಿಯ ಪ್ರಶ್ನೆಯಿಂದ, ಧರ್ಮದ ಪ್ರತಿಷ್ಠೆಯಿಂದ ಹೆಸರುಗಳನ್ನು ಬದಲಾಯಿಸುವುದು ದ್ವೇಷದ, ಸೇಡಿನ ರಾಜಕಾರಣವಾಗುತ್ತದೆ.

ಯಾವುದೇ ರಾಜಕೀಯ ಪಕ್ಷವು ಇನ್ನು ಮುಂದೆ ಹೆಸರುಗಳನ್ನು ಇಡುವಾಗ ರಾಜಕೀಯಕ್ಕೆ ಸಂಬಂಧಿಸಿದವರ ಹೆಸರುಗಳನ್ನು ಇಡುವುದನ್ನೇ ಬಿಡುವ ನಿರ್ಣಯ ಕೈಗೊಳ್ಳಬೇಕು. ಹೀಗಾದಾಗ, ಹೆಸರು ಬದಲಿಸಿ ಒಬ್ಬ ವ್ಯಕ್ತಿಗೆ ಅವಮರ್ಯಾದೆ ಮಾಡುವುದು ತಪ್ಪುತ್ತದೆ.

⇒ಡಾ. ಎ.ಆರ್.ಗೋವಿಂದಸ್ವಾಮಿ ನಾಯಕ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.