ADVERTISEMENT

ಅವೈಜ್ಞಾನಿಕ ಆಲೋಚನೆಗೆ ದಾರಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 19:30 IST
Last Updated 17 ಅಕ್ಟೋಬರ್ 2021, 19:30 IST

ಶಾಸಕ ಜಮೀರ್ ಅಹ್ಮದ್ ಅವರು ತಮ್ಮ ಒಡೆತನದ ಅತಿಥಿಗೃಹವನ್ನು ಸಿದ್ದರಾಮಯ್ಯ ಅವರ ರಾಜಕೀಯ ಚಟುವಟಿಕೆಗಳಿಗೆ ಬಿಟ್ಟುಕೊಡುವ ನಿರ್ಧಾರ (ಪ್ರ.ವಾ., ಅ. 12) ವೈಯಕ್ತಿಕವಾದುದು. ಅದಕ್ಕೆ ಯಾರದೂ ಅಭ್ಯಂತರ ಇರಲಾರದು. ಆದರೆ, ಎಚ್‌.ಡಿ.ಕುಮಾರಸ್ವಾಮಿ ಅವರು ಇದೇ ಅತಿಥಿಗೃಹದಲ್ಲಿ ಇದ್ದದ್ದರಿಂದಲೇ ಅವರಿಗೆ ಅದೃಷ್ಟ ಒಲಿದುಬಂದು ಎರಡು ಬಾರಿ ಮುಖ್ಯಮಂತ್ರಿಯಾದರು ಎಂಬ ತಮ್ಮ ನಂಬಿಕೆಯನ್ನು ಅವರು ಇದಕ್ಕೆ ಆಧಾರವಾಗಿ ನೀಡಿದ್ದು ಸರಿಯಲ್ಲ. ಹಾಗೆಯೇ, ಪ್ರಸ್ತುತ ಶಾಸಕರು ಮಾತ್ರ ಇಂಥ ನಂಬಿಕೆಗೆ ಮೊದಲಿಗರೇನೂ ಅಲ್ಲ. ಇತ್ತೀಚೆಗೆ, ಇಡೀ ಸಮಾಜ ಒಂದಲ್ಲ ಒಂದು ರೀತಿಯ ಕುರುಡು ನಂಬಿಕೆಗಳನ್ನು ಸೃಷ್ಟಿ ಮಾಡುವ ಕಾರ್ಖಾನೆಯಾಗುತ್ತಿದೆ ಎನ್ನುವುದೇ ಆತಂಕಕಾರಿ.

ಜನತಂತ್ರದಲ್ಲಿ ಯಾರೇ ಆಗಲಿ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿ ಬರುವುದು ಅವರ ‘ಅದೃಷ್ಟ’ದಿಂದಲ್ಲ, ಜನರು ಅವರ ಕೆಲಸಕಾರ್ಯಗಳನ್ನು ಮೆಚ್ಚಿ ಅವರನ್ನು ತಮ್ಮ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡಿಕೊಂಡಾಗ ಮಾತ್ರ. ಆದ್ದರಿಂದ, ಜನನಾಯಕರು ಜನಹಿತದ ಕಾರ್ಯಗಳನ್ನು ಮಾಡಿ, ಜನರ ಮನಸ್ಸನ್ನು ಗೆಲ್ಲಲಿ. ಅದನ್ನೇ ‘ಅದೃಷ್ಟ’ ಎಂದು ಒಪ್ಪಬಹುದು. ಇವೆಲ್ಲದರ ನಡುವೆ ಜನರಲ್ಲಿ ವೈಜ್ಞಾನಿಕ ಮನೋವೃತ್ತಿ ಬೆಳೆಸುವುದು ಹೇಗೆ ಎಂಬ ಬಗ್ಗೆ ಚಿಂತನೆ ಕೂಡ ನಡೆಯಬೇಕಾಗಿದೆ.

-ಡಾ. ಜಿ.ಬೈರೇಗೌಡ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT