ADVERTISEMENT

ಬದಲಾಗುವುದು ಅಗತ್ಯ

ಕಡೂರು ಫಣಿಶಂಕರ್  ಬೆಂಗಳೂರು
Published 14 ಅಕ್ಟೋಬರ್ 2018, 20:03 IST
Last Updated 14 ಅಕ್ಟೋಬರ್ 2018, 20:03 IST

‘ನಾವು ಸಂತೋಷವಾಗಿರಬೇಕು, ನಮ್ಮವರು ಸಂತೋಷವಾಗಿರಬೇಕು ಎಂದು ಬಹುತೇಕರು ತಪ್ಪು ದಾರಿಯನ್ನು ಆಯ್ದುಕೊಳ್ಳುತ್ತಿದ್ದಾರೆ’ (ಪ್ರ.ವಾ., ಅ.14) ಎಂದು ಥಿಯಸಾಫಿಕಲ್ ಸೊಸೈಟಿಯ ಅಧ್ಯಕ್ಷ ಟಿಮ್ ಬಾಯ್ಡ್ ಆತಂಕ ವ್ಯಕ್ತಪಡಿಸಿರುವುದು ಇಂದಿನ ಪರಿಸ್ಥಿತಿಗೆ ಕನ್ನಡಿ ಹಿಡಿದಂತಿದೆ.

‘ಕೊಳ್ಳುಬಾಕತನ ಮತ್ತು ಮೌಢ್ಯಗಳಿಂದ ನಾವು ವಿನಾಶದೆಡೆಗೆ ಹೋಗುತ್ತಿದ್ದೇವೆ’ ಎಂದೂ ಅವರು ಹೇಳಿದ್ದಾರೆ. ನಿಜ, ‘ನಾನು ಮತ್ತು ನನ್ನವರಿಗೆ ಏನು ಬೇಕೋ ಅಷ್ಟನ್ನು ಮಾತ್ರ ಯೋಚಿಸಬೇಕು, ಬೇರೆಯವರ ಅಥವಾ ಒಟ್ಟಾರೆ ಸಮಾಜದ ಏಳಿಗೆಯ ಬಗ್ಗೆ ಯೋಚನೆ ಮಾಡುವ ಅಗತ್ಯವೇ ಇಲ್ಲ’ ಎಂಬಂಥ ಭಾವವನ್ನು ಇಂದಿನ ಪೀಳಿಗೆಯಲ್ಲಿ ನಾವು ಮೂಡಿಸುತ್ತಿದ್ದೇವೆ.

ಆದರೆ ಒಂದು ವಿಷಯವನ್ನು ನಾವೆಲ್ಲರೂ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕಿದೆ. ಒಟ್ಟಾರೆ ಸಮಾಜದಲ್ಲಿ ನಾವು ಸಹ ಒಬ್ಬರಾಗಿರುವುದರಿಂದ, ನಾವು ಮಾತ್ರ ಸಂತೋಷದಿಂದ ಇದ್ದರೆ ಸಾಲದು, ನಮ್ಮ ಸುತ್ತಮುತ್ತಲಿನವರು ಸಂತೋಷದಿಂದಿದ್ದರೆ ಮಾತ್ರ ನಮ್ಮ ಸಂತೋಷಕ್ಕೆ ಬೆಲೆ ಎಂದು ಯೋಚಿಸಿ ಆ ನಿಟ್ಟಿನಲ್ಲಿ ಎಲ್ಲರೂ ಜೀವನ ನಡೆಸುವುದು ಅಗತ್ಯ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.