ADVERTISEMENT

ವಿ.ವಿ ಸ್ಥಾಪನೆಯಾದರೆ ಸಾಕೇ?

ನರಸಿಂಹಮೂರ್ತಿ ಹಳೇಹಟ್ಟಿ
Published 17 ಫೆಬ್ರುವರಿ 2019, 20:15 IST
Last Updated 17 ಫೆಬ್ರುವರಿ 2019, 20:15 IST

ಬುದ್ಧ, ಬಸವ, ಅಂಬೇಡ್ಕರ್ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದ್ದಾರೆ (ಪ್ರ.ವಾ., ಫೆ. 11). ಈಗಾಗಲೇ ನಾಯಿಕೊಡೆಗಳಂತೆ ಸ್ಥಾಪನೆಯಾಗಿರುವ ಹಲವಾರು ವಿಶ್ವವಿದ್ಯಾಲಯಗಳು ಮೂಲ ಸೌಕರ್ಯಗಳಿಲ್ಲದೆ ಸೊರಗುತ್ತಿವೆ. ವಿಪರ್ಯಾಸವೆಂದರೆ, ಕೆಲವು ವಿಶ್ವವಿದ್ಯಾಲಯಗಳಲ್ಲಿ ನೇಮಕಾತಿಯೇ ನಡೆದಿಲ್ಲ.

ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಮಹಾನ್ ಚಿಂತಕರು, ದಾರ್ಶನಿಕರು, ಶರಣರ ಹೆಸರಿನಲ್ಲಿ ಅಧ್ಯಯನ ಪೀಠಗಳಿವೆ. ಇವು ಕೇವಲ ದತ್ತಿನಿಧಿಗಳ ಬಡ್ಡಿ ಹಣದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಎಷ್ಟೋ ಪೀಠಗಳಿಗೆ ಸ್ವತಂತ್ರ ಕಟ್ಟಡಗಳೂ ಇಲ್ಲ. ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಬದಲು, ಸಂಪನ್ಮೂಲ ಕೊರತೆಯಿಂದ ನರಳುತ್ತಿರುವ ಬಸವ, ಕನಕ, ಗಾಂಧಿ, ಅಂಬೇಡ್ಕರ್, ಲೋಹಿಯಾ ಮುಂತಾದ ಪೀಠಗಳನ್ನು ಭೌತಿಕವಾಗಿ, ಬೌದ್ಧಿಕವಾಗಿ ಅಭಿವೃದ್ಧಿಪಡಿಸಲಿ.

ಮೂಡಿಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.