ADVERTISEMENT

ಆಡಳಿತಾತ್ಮಕ ಸೇವೆಗಳತ್ತ...

ಲಕ್ಷ್ಮೀಕಾಂತ್ ಎಲ್.ವಿ.
Published 9 ಏಪ್ರಿಲ್ 2019, 20:01 IST
Last Updated 9 ಏಪ್ರಿಲ್ 2019, 20:01 IST

ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕದ 24 ಅಭ್ಯರ್ಥಿಗಳು ರ್‍ಯಾಂಕ್‌ ಪಡೆದಿರುವುದು ಸಂತಸದ ವಿಷಯ.

ಈ ಸಾಧಕರಿಗೆ ಅಭಿನಂದನೆಗಳು. ಎಂಜಿನಿಯರಿಂಗ್, ವೈದ್ಯಕೀಯದಂಥ ಪದವಿಗಳ ಬಗೆಗಿನ ಮೋಹ ಹೆಚ್ಚಿರುವ ಈ ಸಂದರ್ಭದಲ್ಲಿ ಆಡಳಿತಾತ್ಮಕ ಸೇವೆಗಳತ್ತ ಯುವ ಮನಸುಗಳು ಮುಖ ಮಾಡಿರುವುದು ಸ್ವಾಗತಾರ್ಹ.

ಯುಪಿಎಸ್‌ಸಿ ಪರೀಕ್ಷೆ ಕಬ್ಬಿಣದ ಕಡಲೆ, ಅದು ಸಾಮಾನ್ಯರಿಗಲ್ಲ ಎಂಬ ಭಾವನೆ ಸಮಾಜದಲ್ಲಿ ಇದೆ. ಆದರೆ ವ್ಯವಸ್ಥಿತ ಓದು, ಶ್ರದ್ಧೆ, ಸೂಕ್ತ ತರಬೇತಿಯಿಂದ ಈ ಕನಸನ್ನು ನನಸಾಗಿಸಿಕೊಳ್ಳುವುದು ಕಷ್ಟವೇನಲ್ಲ. ಮುಂದಿನ ದಿನಗಳಲ್ಲಿ ಕರ್ನಾಟಕದಿಂದ ಇಂತಹ ಮತ್ತಷ್ಟು ಯುವಪ್ರತಿಭೆಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅರಳಲಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.