ADVERTISEMENT

ಗ್ರಂಥಾಲಯ ಅನ್‌ಲಾಕ್‌ ಮಾಡಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 19:30 IST
Last Updated 18 ಜೂನ್ 2020, 19:30 IST

ಲಾಕ್‌ಡೌನ್‌ ಸಡಿಲಿಕೆಯಾದ ಬಳಿಕ ಬಹುತೇಕ ಕ್ಷೇತ್ರಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ಸಾರ್ವಜನಿಕ ಗ್ರಂಥಾಲಯಗಳು ಮಾತ್ರ ತೆರೆದಿಲ್ಲ. ಗ್ರಂಥಾಲಯ ಇಲಾಖೆಯ ಕಚೇರಿಗೆ ಕರೆ ಮಾಡಿ ಕೇಳಿದರೆ, ಸರ್ಕಾರದ ಮುಂದೆ ಪ್ರಸ್ತಾವ ಇರಿಸಿದ್ದೇವೆ, ಅಲ್ಲಿಂದ ಉತ್ತರ ಬಂದಿಲ್ಲ ಎನ್ನುತ್ತಾರೆ.

ಹಲವು ಹುದ್ದೆಗಳ ನೇಮಕಾತಿಗೆ ಇತ್ತೀಚೆಗೆ ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಎಫ್‌ಡಿಎ, ಎಸ್‌ಡಿಎ, ಪೊಲೀಸ್‌ ಹುದ್ದೆಗಳ ಪರೀಕ್ಷೆಗಳು ತುಂಬಾ ಹತ್ತಿರದಲ್ಲಿವೆ. ಖಾಸಗಿ ಸ್ಟಡಿ ಸೆಂಟರ್‌ಗಳು ಈಗಾಗಲೇ ತೆರೆದಿವೆಯಾದರೂ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಅಲ್ಲಿ ಸೇರುವುದು ಕಷ್ಟವಾಗುತ್ತದೆ. ಇಂತಹವರ ಅಧ್ಯಯನಕ್ಕೆ ಗ್ರಂಥಾಲಯಗಳೇ ಸೂಕ್ತ. ಹೀಗಾಗಿ ಸರ್ಕಾರ ಮುತುವರ್ಜಿ ವಹಿಸಿ ಗ್ರಂಥಾಲಯಗಳ ಆರಂಭಕ್ಕೆ ಅವಕಾಶ ಮಾಡಿಕೊಡಬೇಕು.

ಶ್ರೀಧರ್‌ ಎನ್‌. ಹೊಸಹಳ್ಳಿ, ಶ್ರೀರಂಗಪಟ್ಟಣ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.