ADVERTISEMENT

ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಲಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 15:19 IST
Last Updated 23 ಡಿಸೆಂಬರ್ 2019, 15:19 IST

ಸ್ವಾತಂತ್ರ್ಯಾನಂತರ ಜಾತ್ಯತೀತ ರಾಷ್ಟ್ರವೆಂದು ಪರಿಗಣಿಸಿದ ಬಳಿಕ ಜನರು ತಮ್ಮ ಪಾಡಿಗೆ ತಾವು ಹೇಗೋ ಜೀವಿ
ಸುತ್ತಿದ್ದಾರೆ. ತಮಗೆ ಬೇಕಾದ ಆಚರಣೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ
ಬೇಳೆ ಬೇಯಿಸಿಕೊಳ್ಳಲು ಜಾತಿಗಳ ಮೊರೆ ಹೋಗಿವೆ. ಜನರನ್ನು ಪರಸ್ಪರ ಎತ್ತಿಕಟ್ಟಿ ತ್ವೇಷಮಯ ವಾತಾವರಣ ಸೃಷ್ಟಿಯಾಗಲು ಕಾರಣವಾಗಿವೆ. ಮಹಾತ್ಮರ ಹೆಸರುಗಳನ್ನೂ ಎಗ್ಗಿಲ್ಲದೆ ಬಳಸಿಕೊಳ್ಳುತ್ತಿವೆ. ಹೆಸರು ಬದಲಿಸುವು
ದನ್ನೇ ದೊಡ್ಡ ಸಾಧನೆ ಎಂದು ಆಳುವವರು ತಿಳಿದುಕೊಂಡಂತಿದೆ. ಒಡೆದು ಆಳುವ ಈ ನೀತಿ ಇಲ್ಲಿಗೇ ನಿಲ್ಲಲಿ.

ಜನರನ್ನು ಅವರ ಪಾಡಿಗೆ ಬಿಡಿ. ಜೊತೆಗೆ ಈ ದೇಶದ ಸಂಸ್ಕೃತಿ, ಸಂಸ್ಕಾರಗಳನ್ನೂ ಹಾಗೇ ಇರಲು ಬಿಡಿ. ‘ಭಾಗ್ಯ’ಗಳನ್ನು ಬೇಕಾದರೆ ನಿಲ್ಲಿಸಿಬಿಡಿ. ದುಡಿದು ತಿನ್ನಲು ಅವಕಾಶ ಕೊಡಿ.ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಬಂದಿದೆ. ಅದನ್ನಾದರೂ ಮಾಡಿಕೊಂಡು, ಸಮಾಜದ ಒಟ್ಟಾರೆ ಅಭಿವೃದ್ಧಿಯ ಕಡೆ ಗಮನಹರಿಸಲಿ.

ಜಿ. ನಾಗರತ್ನಮ್ಮ,ಹಿರಿಯೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.