ADVERTISEMENT

ವಾಚಕರ ವಾಣಿ | ವಿಮಾನಯಾನ ಪುನರಾರಂಭ: ಮರುಚಿಂತನೆ ಅಗತ್ಯ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 28 ನವೆಂಬರ್ 2021, 19:30 IST
Last Updated 28 ನವೆಂಬರ್ 2021, 19:30 IST

ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಕೊರೊನಾ ವೈರಸ್ಸಿನ ಹಾವಳಿಗೆ ತತ್ತರಿಸಿ ಅಂತರರಾಷ್ಟ್ರೀಯ ವಿಮಾನಯಾನ ಸಂಚಾರವನ್ನು ನಿರ್ಬಂಧಿಸಿದ್ದ ಅಧಿಸೂಚನೆಯನ್ನು 21 ತಿಂಗಳ ನಂತರ ಹಿಂಪಡೆದು, ನಾಗರಿಕ ವಿಮಾನ ಸಂಚಾರವನ್ನು ಡಿಸೆಂಬರ್‌ನಲ್ಲಿ ಮರು ಆರಂಭಿಸುವುದಾಗಿ ಆದೇಶ ಹೊರಡಿಸಿದ ವರದಿಗಳು ಪ್ರಕಟವಾಗಿವೆ. ಇದು ದೇಶವಾಸಿಗಳನ್ನು ಮತ್ತೆ ಚಿಂತೆಗೀಡುಮಾಡಿದೆ.

‘ಯಾರೋ ಮಾಡುವ ತಪ್ಪಿಗೆ, ಯಾವುದೇ ದೇಶದ ಮೂಲೆಯಲ್ಲಿರುವ ಮಹಾಮಾರಿ ವೈರಾಣುವಿನ ಸೋಂಕನ್ನು ನಮ್ಮ ಮೇಲೆ ತಂದು ಹಾಕುವುದು ನ್ಯಾಯವೇ? ಇಷ್ಟು ದಿನ ಅನುಭವಿಸಿದ ನೋವು, ಸಂಕಟ ಸಾಲದೇ’ ಎಂಬ ಪ್ರಶ್ನೆ ಜನಸಾಮಾನ್ಯರ ಚರ್ಚೆಗೆ ಅನುವು ಮಾಡಿದೆ. ಕೊರೊನಾ ವೈರಸ್ಸಿನ ಹೊಸ ರೂಪಾಂತರ ತಳಿ ‘ಓಮಿಕ್ರಾನ್‌’ ಅಪಾಯಕಾರಿ ವೈರಾಣು ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಇದು ಹರಡಬಹುದಾದ ಆತಂಕ ಎದುರಾಗಿದೆ. ವಿಮಾನಯಾನ ನಿರ್ಬಂಧ ಸಡಿಲಿಕೆ ಮಾಡಿದರೆ ವಿಶ್ವದ ಹಲವು ದೇಶಗಳಲ್ಲಿ ಈಗಾಗಲೇ ಹರಡಿರುವ ಈ ರೂಪಾಂತರಿ ತಳಿ ಆ ದೇಶಗಳಿಂದ ಬರುವ ಪ್ರಯಾಣಿಕರಿಂದ ನಮ್ಮ ದೇಶದೆಲ್ಲೆಡೆ ಹರಡುವ ಸಾಧ್ಯತೆ ಇಲ್ಲದಿಲ್ಲ. ದೇಶದ ಜನರನ್ನು ಅಪಾಯಕ್ಕೆ ದೂಡುವ ಮೊದಲು ಸರ್ಕಾರ ಎಚ್ಚರಿಕೆಯ ನಿರ್ಧಾರಗಳನ್ನು ತೆಗೆದುಕೊಂಡು ದೇಶವಾಸಿಗಳ ರಕ್ಷಣೆ ಮಾಡಬೇಕಾಗಿದೆ.

–ಆರ್.ಬಿ.ಜಿ. ಘಂಟಿ, ಅಮೀನಗಡ, ಬಾಗಲಕೋಟೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.