ADVERTISEMENT

ಪುರಾತತ್ವ ಸ್ಮಾರಕ: ದುರುಪಯೋಗ ತಪ್ಪಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 15 ಏಪ್ರಿಲ್ 2021, 19:30 IST
Last Updated 15 ಏಪ್ರಿಲ್ 2021, 19:30 IST

ಐಹೊಳೆಯಲ್ಲಿನ ಹಲವು ಐತಿಹಾಸಿಕ ಸ್ಮಾರಕಗಳು ಸ್ಥಳೀಯರ ಬಯಲು ಶೌಚಕ್ಕೆ, ಸಾಕುಪ್ರಾಣಿಗಳನ್ನು ಕಟ್ಟಲು ಹಾಗೂ ಇತರ ಸ್ವಂತ ಕೆಲಸಗಳಿಗೆ ಬಳಕೆಯಾಗುತ್ತಿರುವುದನ್ನು ಓದಿ (ಪ್ರ.ವಾ., ಏ. 15) ಮನಸ್ಸಿಗೆ ನೋವಾಯಿತು. ಐತಿಹಾಸಿಕ ಸ್ಮಾರಕಗಳ ಬಗ್ಗೆ ಯಾವುದೇ ಕಾಳಜಿ ಇಲ್ಲದಿರುವ ಸ್ಥಳೀಯರು ಒಂದೆಡೆಯಾದರೆ, ಸಂಬಂಧಪಟ್ಟ ಇಲಾಖಾ ಸಿಬ್ಬಂದಿಯ ಬೇಜವಾಬ್ದಾರಿತನ ಮತ್ತೊಂದೆಡೆ ಎದ್ದು ಕಾಣುತ್ತದೆ. ಸ್ಮಾರಕಗಳ ದುರುಪಯೋಗ, ಅತಿಕ್ರಮಣ, ಹಾನಿ, ವಿಗ್ರಹಗಳ ಕಳ್ಳತನದಂತಹ ಸಂದರ್ಭಗಳಲ್ಲಿ ಇಲಾಖೆಯವರು ಸಿಬ್ಬಂದಿ ಕೊರತೆಯ ನೆಪ ಹೇಳಿ ಕೈತೊಳೆದುಕೊಂಡು ಬಿಡುತ್ತಾರೆ. ಸ್ಮಾರಕಗಳನ್ನು ಕಾಪಾಡಿಕೊಳ್ಳುವುದರಲ್ಲಿ ಇಲಾಖೆಯ ಜವಾಬ್ದಾರಿ ಎಷ್ಟಿರುತ್ತದೋ ಅದಕ್ಕಿಂತ ಹೆಚ್ಚಿನ ಹೊಣೆಯನ್ನು ಸ್ಥಳೀಯರು ಹೊರಬೇಕಾಗುತ್ತದೆ.

ಈ ತರಹದ ಸ್ಮಾರಕಗಳನ್ನು ಈಗ ಸುಲಭವಾಗಿ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಆದರೆ ಇರುವುದನ್ನು ಕಾಪಾಡಿಕೊಳ್ಳುವುದರ ಬಗ್ಗೆ ಯೋಚಿಸಬೇಕಲ್ಲವೇ? ಮುಂದಿನ ಪೀಳಿಗೆಯವರು ಐತಿಹಾಸಿಕ ಸ್ಮಾರಕಗಳನ್ನು ನೋಡುವಂತಹ ಅವಕಾಶಕ್ಕಾಗಿ ಅವುಗಳನ್ನು ಉಳಿಸುವುದು ಸರ್ಕಾರದ ಮತ್ತು ನಮ್ಮೆಲ್ಲರ ಜವಾಬ್ದಾರಿ. ಐತಿಹಾಸಿಕ ಸ್ಮಾರಕಗಳಿಗೆ ಪ್ರವಾಸಿಗರನ್ನು ಸೆಳೆಯುವಲ್ಲಿ ಪ್ರವಾಸೋದ್ಯಮ ಇಲಾಖೆ ರೂಪುರೇಷೆಯನ್ನು ಸಿದ್ಧಪಡಿಸುವುದು ಅತ್ಯಂತ ಅವಶ್ಯಕ. ಸರ್ಕಾರ ಸರಿಯಾದ ಸಾರಿಗೆ ಸೌಕರ್ಯ ಒದಗಿಸಿ, ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವಂತೆ ನೋಡಿಕೊಳ್ಳಬೇಕು. ಇದರಿಂದ ಬರುವ ಆದಾಯವನ್ನು ಸ್ಮಾರಕಗಳ ಸೂಕ್ತ ನಿರ್ವಹಣೆಗೆ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಸ್ಮಾರಕಗಳ ದುರುಪಯೋಗವನ್ನೂ ತಡೆಯಬಹುದು.

- ಕೆ.ಪ್ರಭಾಕರ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.