ADVERTISEMENT

ತ್ವರಿತ ಮುನ್ನೆಚ್ಚರಿಕೆ ಅಗತ್ಯ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 14 ಏಪ್ರಿಲ್ 2021, 19:30 IST
Last Updated 14 ಏಪ್ರಿಲ್ 2021, 19:30 IST

ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ 30ರಷ್ಟು ಹಾಸಿಗೆಗಳನ್ನು ಕೋವಿಡ್ ರೋಗಿಗಳ ಸಲುವಾಗಿ ಸರ್ಕಾರದ ವತಿಯಿಂದ ಮೀಸಲಿಡಲಾಗಿತ್ತು. ಈಗ ಕೋವಿಡ್ ಎರಡನೇ ಅಲೆ ಅತಿ ವೇಗವಾಗಿ ಹರಡುತ್ತಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಈಗ ಕನಿಷ್ಠ ಪಕ್ಷ ಶೇ 50ರಿಂದ 60ರಷ್ಟು ಹಾಸಿಗೆಗಳು ಬೇಕಾಗಬಹುದು. ಹಾಸಿಗೆಗಳನ್ನು ಬೆಂಗಳೂರಿನಲ್ಲಿಮಾತ್ರವಲ್ಲದೆ ರಾಜ್ಯದ ಎಲ್ಲೆಡೆ ಮೀಸಲಿಡುವಂತೆ ನೋಡಿಕೊಳ್ಳಬೇಕು.

ಕೋವಿಡ್ ರೋಗಿಗಳಿಗೆ ಅಗತ್ಯವಾದ ರೆಮ್‌ಡೆಸಿವಿಯರ್‌ ಔಷಧಿ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಾಗುತ್ತಿಲ್ಲ. ಚಿಕಿತ್ಸೆಯಲ್ಲಿ ಆಮ್ಲಜನಕವು ಪ್ರಮುಖ ಪಾತ್ರ ವಹಿಸುವುದರಿಂದ ಆಕ್ಸಿಜನ್, ಆಕ್ಸಿಜನ್ ಜನರೇಟರ್ ಕೊರತೆಯಾಗುವ ಸಾಧ್ಯತೆ ಇರುತ್ತದೆ. ಬೇರೆ ರಾಜ್ಯಗಳಲ್ಲಿ ಹೆಚ್ಚಿನ ಆಸ್ಪತ್ರೆಗಳು ಆಮ್ಲಜನಕದ ಸಿಲಿಂಡರ್‌ಗಳ ತೀವ್ರ ಕೊರತೆಯನ್ನು ಎದುರಿಸುತ್ತಿವೆ. ಇದನ್ನೆಲ್ಲ ಪರಿಶೀಲಿಸಿ ನಮ್ಮ ಸರ್ಕಾರ ತ್ವರಿತವಾಗಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.

- ವಿಜಯಕುಮಾರ್ ಎಚ್.ಕೆ., ರಾಯಚೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.