ಕೊರೊನಾ ತಡೆಗೆ ಕೆಲವು ಸರ್ಕಾರಿ ಇಲಾಖೆಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿದ್ದರೆ, ಇನ್ನು ಕೆಲವು ಇಲಾಖೆಗಳು ಕೆಲಸವಿಲ್ಲದೇ ಸಂಬಳ ಪಡೆಯು ವಂತಾಗಿದೆ. ಇದರಲ್ಲಿ ಶಿಕ್ಷಣ ಇಲಾಖೆಯೂ ಒಂದು. ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಕಡಿಮೆ ಸಂಖ್ಯೆ
ಯಲ್ಲಿರುವ ಪೊಲೀಸರು ಹಗಲಿರುಳೂ ದುಡಿಯುತ್ತಿ ದ್ದಾರೆ. ಶಿಕ್ಷಕರಾದ ನಾವು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ದುಡಿಯುವ ನೌಕರ ವರ್ಗಕ್ಕೆ ಹೆಗಲು ಕೊಡಬಹು ದಾಗಿದೆ. ಈ ದಿಸೆಯಲ್ಲಿ ರಾಜ್ಯದ ಎಲ್ಲ ಶಿಕ್ಷಕ ಸಂಘಟನೆ ಗಳು ಹಾಗೂ ಜನಪ್ರತಿನಿಧಿಗಳು ಸಕಾರಾತ್ಮಕ ಚಿಂತನೆ ಯೊಂದಿಗೆ ಸ್ಪಂದಿಸಬೇಕು.
ಕೆ.ಬಿ.ಹೊನ್ನಾಯ್ಕ,ಸದಲಗಾ, ಚಿಕ್ಕೋಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.