ADVERTISEMENT

ವಾಚಕರ ವಾಣಿ | ಬದುಕಲು ಹೋರಾಟ: ದುಬಾರಿ ಪ್ರಾತ್ಯಕ್ಷಿಕೆ!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 18 ಆಗಸ್ಟ್ 2021, 19:46 IST
Last Updated 18 ಆಗಸ್ಟ್ 2021, 19:46 IST

‘ರಾಜಕೀಯ ಕ್ರಾಂತಿ’ ಹಿನ್ನೆಲೆಯಲ್ಲಿ ಅಫ್ಗಾನಿಸ್ತಾನದ ಪ್ರಜೆಗಳು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಎದ್ದರೂ ಸರಿ, ಬಿದ್ದರೂ ಸರಿಯೆಂದು ದೌಡಾಯಿಸಿ ವಿಮಾನವೇರಲು ಮುಂದಾದ ಸುದ್ದಿ, ಚಿತ್ರ ಎಂತಹವರಿಗೂ ಎದೆ ನಡುಗಿಸುವಂಥದ್ದು. ವಿಮಾನದ ರೆಕ್ಕೆ ಮೇಲೆ ಅಥವಾ ಟೈರಿಗೆ ಲಗತ್ತಾಗಿ ಪ್ರಯಾಣಿಸುವುದು ಅಸಾಧ್ಯವೆನ್ನುವುದೂ ದೇಶ ತೊರೆಯುವ ತರಾತುರಿ, ಆತಂಕಕ್ಕೆ ತಿಳಿಯಲಿಲ್ಲ.ವಿಮಾನವು ಬಸ್ಸು, ರೈಲಿಗಿಂತ ಬಹು ಭಿನ್ನ. ಗಾಳಿಯ ಧಾವಂತವೇ ವಿಮಾನದ ರಹಸ್ಯ. ವಿಮಾನ ಸಾಧಾರಣವಾಗಿ 30,000 ಅಡಿ ಎತ್ತರದಲ್ಲಿ, ತಾಸಿಗೆ 700 ಕಿ.ಮೀ. ವೇಗದಲ್ಲಿ ಹಾರುತ್ತದೆ. ಎತ್ತರಕ್ಕೆ ಹೋದಂತೆ ಕಡಿಮೆ ಆಮ್ಲಜನಕ. 10,000 ಅಡಿ ಎತ್ತರದಲ್ಲಿ ವಿಮಾನದ ಹೊರಗೆ ಸೊನ್ನೆಗಿಂತ 7 ಡಿಗ್ರಿ ಸೆ. ಕಡಿಮೆ ತಾಪಮಾನ, 30,000 ಅಡಿ ಎತ್ತರದಲ್ಲಿ ಸೊನ್ನೆಗಿಂತ 72 ಡಿಗ್ರಿ ಸೆ. ಕಡಿಮೆ ತಾಪಮಾನ! ಊಹೆಗೂ ನಿಲುಕದ ಚಳಿ. ಪ್ರಯಾಣಿಕ (?) ಆಗಲೇ ಪ್ರಜ್ಞಾಹೀನನಾಗಿರುತ್ತಾನೆ. ಗಾಳಿಯ ರಭಸ ಉಸಿರಾಟ
ನಿಲ್ಲಿಸಿರುತ್ತದೆ.

‘ಪ್ರತಿಯೊಂದು ಜೀವಿಯೂ ಸಾವು ಗೆಲ್ಲಲು ಶತಾಯ ಗತಾಯ ಹೋರಾಡುತ್ತದೆ, ಬದುಕಲು ಬಯಸುತ್ತದೆ’ ಎಂಬ ಡಾರ್ವಿನ್ನನ ವಿಕಾಸವಾದದ ಸಮರ್ಥನೆಗೆ ಮೂರು ಮಂದಿ ಜೀವ ತೆತ್ತರು. ಎಷ್ಟೊಂದು ದುಬಾರಿಯಾದ ಪ್ರಾತ್ಯಕ್ಷಿಕೆ?

- ಬಿಂಡಿಗನವಿಲೆ ಭಗವಾನ್‌,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.