ದೇಶದಿಂದ ಪರಾರಿ ಆಗಿರುವ ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಅವರಿಂದ ಬ್ಯಾಂಕ್‌ಗಳಿಗೆ ವಂಚನೆಯಾಗಿದೆ ಎನ್ನಲಾದ ಹಣದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ₹ 9 ಸಾವಿರ ಕೋಟಿ ವಸೂಲಿ ಮಾಡಿರುವುದು ಸ್ವಾಗತಾರ್ಹ ಬೆಳವಣಿಗೆ. ಇವರು ದೇಶದ ನಾನಾ ಬ್ಯಾಂಕ್‌ಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಸಾಲ ಬಾಕಿ ಉಳಿಸಿಕೊಂಡಿರುವುದರಿಂದ ಇವರ ಸಂಪೂರ್ಣ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು.
ದೇಶದ ಬ್ಯಾಂಕಿಂಗ್ ವಲಯದ ಈ ಅತಿದೊಡ್ಡ ‘ವಂಚನೆ’ ಪ್ರಕರಣದಲ್ಲಿ ಮೂವರಿಗೂ ಜೈಲು ಶಿಕ್ಷೆಯಾಗಬೇಕು. ವಂಚನೆ ಬೆಳಕಿಗೆ ಬರುವ ಮುನ್ನವೇ ವಿದೇಶಕ್ಕೆ ಹಾರಿ ಹೋಗಿರುವ ಇಂತಹವರಿಂದ ನಾವು ನಿರೀಕ್ಷೆ ಮಾಡುವುದಾದರೂ ಏನನ್ನು?
-ಶ್ರೀಧರ್ ಡಿ. ರಾಮಚಂದ್ರಪ್ಪ,ತುರುವನೂರು, ಚಿತ್ರದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.