ADVERTISEMENT

ಮಾನವ ಪ್ರಜ್ಞೆಗೆ ಸಾಕ್ಷಿಯಾದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 19:31 IST
Last Updated 9 ಜುಲೈ 2020, 19:31 IST

ಶನಿವಾರಸಂತೆ ಸಮೀಪದ ಗ್ರಾಮವೊಂದರಲ್ಲಿ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಗೆ ಕುಟುಂಬಸ್ಥರು ಬಾರದೆ, ಗ್ರಾಮಸ್ಥರೇ ಸೂಕ್ತ ರೀತಿಯಲ್ಲಿ ಅಂತ್ಯಸಂಸ್ಕಾರ ನಡೆಸಿರುವುದು ಮಾನವ ಪ್ರಜ್ಞೆ ಜೀವಂತ ಇರುವುದಕ್ಕೆ ಸಾಕ್ಷಿ. ಆದರೆ ಸಾವಿನ ಬಗ್ಗೆ ತಿಳಿಸಿದರೂ ಬಾರದ ಹೆಂಡತಿ, ಮಕ್ಕಳ ಹೃದಯಹೀನತೆ ಅದೆಷ್ಟು ಕ್ರೂರ? ಬದುಕಿದ್ದಾಗ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಸಾವಾದಾಗ ಅವನ್ನೆಲ್ಲಾ ಬದಿಗಿಟ್ಟು, ಅಂತಿಮ ನಮನ ಸಲ್ಲಿಸಿ ಮಾನವ ಎನ್ನಿಸಿಕೊಳ್ಳುವುದು ಸಾರ್ಥಕ. ಇಲ್ಲದಿದ್ದರೆ ಪ್ರಾಣಿಗಿಂತಲೂ ಕನಿಷ್ಠ.

- ಬಿ.ಆರ್.ಅಣ್ಣಾಸಾಗರ,ಸೇಡಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT